ವಿಟ್ಲದ ಪ್ರಥಮ ಪೊಲೀಸ್ ಇನ್ಸ್ ಪೆಕ್ಟರ್ ನಾಗರಾಜ್ ಅಧಿಕಾರ ಸ್ವೀಕಾರ: ನಾಗರಿಕರಿಂದ ಅಭಿನಂದನೆ

Update: 2021-07-03 08:24 GMT

ವಿಟ್ಲ : ಪೊಲೀಸ್ ಠಾಣೆಗೆ ಈವರೆಗೆ ಸಬ್ ಇನ್ಸ್'ಪೆಕ್ಟರ್ (ಉಪನಿರೀಕ್ಷಕ) ಹುದ್ದೆ ಮಾತ್ರ ಇತ್ತು. ಆದರೆ ಪ್ರಸ್ತುತ ಪೊಲೀಸ್ ಠಾಣೆ ಯನ್ನು ಸರಕಾರ ಮೇಲ್ದರ್ಜೆಗೇರಿಸಿ ಇನ್ಸ್'ಪೆಕ್ಟರ್ (ವೃತ್ತ ನಿರೀಕ್ಷಕ) ಹುದ್ದೆ ನೀಡಿದೆ.

ವಿಟ್ಲದ ಪ್ರಥಮ ಪೊಲೀಸ್ ಇನ್ಸ್'ಪೆಕ್ಟರ್ ಆಗಿ ನಿಯೋಜನೆಗೊಂಡು ಶುಕ್ರವಾರ ಅಧಿಕಾರ ಸ್ವೀಕರಿಸಿದ ನಾಗರಾಜ್ ಎಚ್.ಇ. ಅವರನ್ನು ಮಂಗಳೂರು ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ ಅವರ ನೇತೃತ್ವದ ತಂಡ ಶನಿವಾರ ಠಾಣೆಗೆ ತೆರಳಿ ಹೂಗುಚ್ಛ ನೀಡಿ, ಸಿಹಿ ಹಂಚಿ ಶುಭ ಹಾರೈಸಿತು.

ರಶೀದ್ ವಿಟ್ಲ ಅವರ ಜೊತೆಗೆ ವಿಟ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಾಬು ಕೆ.ವಿ., ವಿಟ್ಲ ರೋಟರಿ ಕ್ಲಬ್ ಸ್ಥಾಪಕಾಧ್ಯಕ್ಷ ಭಾಸ್ಕರ ಶೆಟ್ಟಿ, ಪೂರ್ವಾಧ್ಯಕ್ಷ ಸಂಜೀವ ಎಂ. ಗಜಾನನ, ವರ್ತಕರ ಸಂಘದ ಕಾರ್ಯದರ್ಶಿ ಕ್ಲಿಫರ್ಡ್ ವೇಗಸ್, ವಿಟ್ಲ ಜೇಸಿಐ ಪೂರ್ವಾಧ್ಯಕ್ಷ ಬಾಲಕೃಷ್ಣ ವಿ., ಮಂಗಳ ಕಲಾ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷ ಅಬೂಬಕರ್ ಅನಿಲಕಟ್ಟೆ, ವಿಟ್ಲ ಬಝಾರ್ ಮಾಲಕ ಉಬೈದ್ ಹಾಗೂ ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದು ಶುಭ ಹಾರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News