×
Ad

ಪಾಕ್ ವಿರುದ್ಧದ ಟಿ-20 ಪಂದ್ಯ ವೇಳೆ 10 ನಿಮಿಷಗಳ ಅಂತರದಲ್ಲಿ ಕುಸಿದು ಬಿದ್ದ ಇಬ್ಬರು ಆಟಗಾರ್ತಿಯರು

Update: 2021-07-03 18:20 IST

ಆಂಟಿಗುವಾ : ಪಾಕಿಸ್ತಾನ ವಿರುದ್ಧದ ಎರಡನೇ ಟಿ-20 ಪಂದ್ಯದ ವೇಳೆ ಇಬ್ಬರು ವೆಸ್ಟ್ ಇಂಡೀಸ್ ಆಟಗಾರ್ತಿಯರು ಹತ್ತು ನಿಮಿಷಗಳ ಅಂತರದಲ್ಲಿ ಮೈದಾನದಲ್ಲಿ ಕುಸಿದು ಬಿದ್ದ ಘಟನೆ ನಡೆದಿದೆ. ಇಬ್ಬರನ್ನೂ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು  ಇಬ್ಬರ ಸ್ಥಿತಿಯೂ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.

ಪಾಕಿಸ್ತಾನ ಇನ್ನಿಂಗ್ಸ್ ನ ನಾಲ್ಕನೇ ಓವರ್ ವೇಳೆ ಶಿನೆಲ್ ಹೆನ್ರಿ ಕುಸಿದು ಬಿದ್ದರು. ತಕ್ಷಣ ಆಟ ನಿಲ್ಲಿಸಲಾಯಿತಲ್ಲದೆ ಎಲ್ಲಾ ಆಟಗಾರ್ತಿಯರು ಅವರತ್ತ ಧಾವಿಸಿದರು. ಹೆನ್ರಿ ಅವರನ್ನು ಸ್ಟ್ರೆಚ್ಚರಿನಲ್ಲಿ  ಆಸ್ಪತ್ರೆಗೆ ಸಾಗಿಸಿದ ನಂತರ ಪಂದ್ಯ ಮುಂದುವರಿಯಿತು.

ಇದಾದ ಹತ್ತು ನಿಮಿಷದಲ್ಲಿಯೇ ಚೆಡಿಯನ್ ನೇಷನ್ ಅವರು ಕುಸಿದು ಬಿದ್ದಾಗ ಮತ್ತೆ ಆಟ ನಿಲ್ಲಿಸಲಾಯಿತು. ಇಬ್ಬರೂ ಪ್ರಜ್ಞೆಯಿಂದಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.‌ ಈ ಸನ್ನಿವೇಶಗಳಲ್ಲಿ ಆಡುವುದು ಅಷ್ಟೊಂದು ಸುಲಭವೇನಲ್ಲ. ಅವರಿಬ್ಬರ ಅನುಪಸ್ಥಿತಿಯಲ್ಲೂ ತಮ್ಮ ತಂಡ ಉತ್ತಮ ಪ್ರದರ್ಶನ ನೀಡಿದ್ದಕ್ಕೆ ಸಂತೋಷವಾಗಿದೆ. ಅವರ ಕುರಿತಾದ ಮಾಹಿತಿಗಾಗಿ ನಾವು ಕಾಯುತ್ತಿದ್ದೇವೆ ಎಂದು ತಂಡದ ತರಬೇತುದಾರ ಕರ್ಟ್ನಿ ವಾಲ್ಶ್‌ ಹೇಳಿಕೆ ನೀಡಿದ್ದಾರೆ.

ಪಂದ್ಯ ಮುಂದುವರಿದು ವೆಸ್ಟ್ ಇಂಡೀಸ್ ಏಳು ರನ್‍ಗಳಿಂದ ಗೆದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News