ಮೂಡುಬಿದಿರೆ: ಘನತ್ಯಾಜ್ಯ ನಿರ್ವಹಣೆಯ ವಾಹನಕ್ಕೆ ಚಾಲನೆ

Update: 2021-07-06 14:26 GMT

ಮೂಡುಬಿದಿರೆ: ಇಲ್ಲಿನ ಪುರಸಭೆಯ 2019-20ನೇ ಸಾಲಿನ 14ನೇ ಹಣಕಾಸು ಮತ್ತು ಸ್ವಚ್ಛ ಭಾರತ್ ಮಿಷನ್ ಯೋಜನೆಯ ಘನತ್ಯಾಜ್ಯ ವಸ್ತು ನಿರ್ವಹಣೆ  ಅನುದಾನದಡಿ ರೂ. 16,46,600ರಂತೆ ಎರಡು ಈಚರ್ ಟಿಪ್ಪರ್‍ಗಳನ್ನು ಖರೀದಿಸಿದ್ದು ಇದಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಮಂಗಳವಾರ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆಯನ್ನು ನೀಡಿದರು. 

 ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್, ಉಪಾಧ್ಯಕ್ಷೆ ಸುಜಾತ ಶಶಿಕಿರಣ್, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಮೂಡಾ ಅಧ್ಯಕ್ಷ ಮೇಘನಾಥ ಶೆಟ್ಟಿ, ಪುರಸಭಾ ಸದಸ್ಯರಾದ ಸ್ವಾತಿ ಎಸ್.ಪ್ರಭು, ರಾಜೇಶ್ ನಾಯ್ಕ್, ನವೀನ್ ಶೆಟ್ಟಿ, ಇಕ್ಬಾಲ್ ಕರೀಂ, ಸೌಮ್ಯ ಸಂದೀಪ್ ಶೆಟ್ಟಿ, ಧನಲಕ್ಷ್ಮೀ, ನಾಮನಿರ್ದೇಶಿತ ಸದಸ್ಯರಾದ ಗಿರೀಶ್ ಕುಮಾರ್, ದಿನೇಶ್ ಪೂಜಾರಿ, ರಾಘವ ಹೆಗ್ಡೆ, ವಕೀಲರಾದ ಶಾಂತಿ ಪ್ರಸಾದ್ ಹೆಗ್ಡೆ, ಪುರಸಭಾ ಮುಖ್ಯಾಧಿಕಾರಿ ಇಂದು ಎಂ, ಪರಿಸರ ಅಭಿಯಂತರೆ ಶಿಲ್ಪಾ, ಹಿರಿಯ ಆರೋಗ್ಯ ನಿರೀಕ್ಷಕ ರಾಜೇಶ್ ಕೆ. ಹಾಗೂ ಪಿಎಸ್‍ಎನ್ ಅಟೋ ಮೊಬೈಲ್‍ಸ್‍ನ ಪ್ರದೀಪ್ ಈ ಸಂದರ್ಭದಲ್ಲಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News