ಪಾಕಿಸ್ತಾನದ ಐಎಸ್ಐಗೆ ಮಾಹಿತಿ ಸೋರಿಕೆ ಆರೋಪ: ಹರ್ಪ್ರೀತ್ ಸಿಂಗ್, ಗುರ್ಭೇಜ್ ಸಿಂಗ್ ಎಂಬ ಇಬ್ಬರು ಯೋಧರ ಬಂಧನ

Update: 2021-07-06 18:18 GMT
ಸಾಂದರ್ಭಿಕ ಚಿತ್ರ 

ಚಂಡಿಗಢ, ಜು. 6: ಬೇಹುಗಾರಿಕೆ ನಡೆಸುತ್ತಿರುವ ಹಾಗೂ ಪಾಕಿಸ್ತಾನದ ಐಎಸ್ಐಗೆ ವರ್ಗೀಕೃತ ದಾಖಲೆಗಳನ್ನು ಪೂರೈಸುತ್ತಿದ್ದ ಆರೋಪದಲ್ಲಿ ಇಬ್ಬರು ಸೇನಾ ಸಿಬ್ಬಂದಿಯನ್ನು ಬಂಧಿಸುವುದರೊಂದಿಗೆ ಪ್ರಮುಖ ಗಡಿರೇಖೆಯ ಬೇಹುಗಾರಿಕೆ ಜಾಲವನ್ನು ಬೇಧಿಸಲಾಗಿದೆ ಎಂದು ಪಂಜಾಬ್  ಪೊಲೀಸರು ಮಂಗಳವಾರ ತಿಳಿಸಿದ್ದಾರೆ. 

ಬಂಧಿತರನ್ನು ಸಿಪಾಯಿ ಹರ್ಪ್ರೀತ್ ಸಿಂಗ್ (23) ಹಾಗೂ ಸಿಪಾಯಿ ಗುರ್ಭೇಜ್ ಸಿಂಗ್ (23) ಎಂದು ಗುರುತಿಸಲಾಗಿದೆ. ಹರ್ಪ್ರೀತ್ ಸಿಂಗ್ ಅಮೃತಸರದ ಚೀಚಾ ಗ್ರಾಮದವರು. ಅವರನ್ನು ಅನಂತ್ ನಾಗ್ ನಲ್ಲಿ ನಿಯೋಜಿಸಲಾಗಿತ್ತು. 19 ರಾಷ್ಟ್ರೀಯ ರೈಫಲ್ಸ್ ಗೆ ಸೇರಿದ ಅವರು 2017ರಲ್ಲಿ ಸೇನೆಗೆ ಸೇರಿದ್ದರು. ಗುರ್ಭೇಜ್ ಸಿಂಗ್ ತರಣ್ತರಣ್ ನ ಪುನಿಯಾನ್ ಗ್ರಾಮದ ನಿವಾಸಿ. 18 ಸಿಕ್ಖ್ ಲೈಟ್ ಇನ್ಫೆಂಟ್ರಿಗೆ ಸೇರಿದ ಅವರು ಕಾರ್ಗಿಲ್ ನ ಕ್ಲರ್ಕ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಅವರು 2015ರಲ್ಲಿ ಭಾರತೀಯ ಸೇನೆ ಸೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News