×
Ad

ರಾಜ್ಯಗಳಿಗೆ 37.07 ಕೋಟಿ ಡೋಸ್ ಲಸಿಕೆ ಪೂರೈಕೆ: ಕೇಂದ್ರ ಸರಕಾರ

Update: 2021-07-06 23:59 IST

ಹೊಸದಿಲ್ಲಿ, ಜು.6: ಇದುವರೆಗೆ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ 37.07 ಕೋಟಿಗೂ ಅಧಿಕ ಡೋಸ್ ಕೋವಿಡ್ ಲಸಿಕೆ ಪೂರೈಸಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಂಗಳವಾರ ಹೇಳಿದೆ. ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ 37, 07,23,840 ಕೋಟಿ ಡೋಸ್ ಲಸಿಕೆ ಒದಗಿಸಿದ್ದು ಇನ್ನೂ 23,80,000 ಡೋಸ್ ಲಸಿಕೆ ಶೀಘ್ರ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಕೈಸೇರಲಿದೆ. ‌

ವ್ಯರ್ಥಪ್ರಮಾಣ ಸೇರಿದಂತೆ 35,40,60,197 ಡೋಸ್ ಲಸಿಕೆ ಬಳಕೆಯಾಗಿದ್ದು ಇನ್ನೂ 1.66 ಕೋಟಿಗೂ ಅಧಿಕ ಡೋಸ್ ಲಸಿಕೆ ಉಳಿದಿದೆ ಎಂದು ಇಲಾಖೆ ಹೇಳಿದೆ. ದೇಶದಲ್ಲಿ ಹೊಸ ಹಂತದ ಲಸಿಕೀಕರಣ ಕಾರ್ಯಕ್ರಮ ಜೂನ್ 21ರಿಂದ ಆರಂಭವಾಗಿದೆ. ರಾಷ್ಟ್ರವ್ಯಾಪಿ ಲಸಿಕೀಕರಣ ಅಭಿಯಾನದ ಅಂಗವಾಗಿ ಕೇಂದ್ರ ಸರಕಾರ ರಾಜ್ಯಗಳಿಗೆ ಲಸಿಕೆಯನ್ನು ಉಚಿತವಾಗಿ ಪೂರೈಸುತ್ತಿದೆ ಎಂದು ಇಲಾಖೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News