ದ.ಕ. ಜಿಲ್ಲೆಯಲ್ಲಿ ಜು.9ರಿಂದ ಆರೆಂಜ್ ಅಲರ್ಟ್

Update: 2021-07-07 15:31 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಜು.7: ದ.ಕ.ಜಿಲ್ಲೆಯಲ್ಲಿ ಕೆಲವು ದಿನಗಳ ಕಾಲ ಬಿಡುವು ಪಡೆದಿದ್ದ ಮಳೆಯು ಬುಧವಾರ ಸುರಿದಿದೆ. ಬೆಳಗ್ಗೆ ಹಲವು ಕಡೆಗಳಲ್ಲಿ ಮಳೆಯಾಗಿದೆ.

ಬುಧವಾರ ದಿನವಿಡೀ ಮುಂಗಾರು ಮತ್ತೆ ಚರುಕಾಗುವ ಲಕ್ಷಣವಿದ್ದರೂ ನಿರೀಕ್ಷಿತ ಮಳೆಯಾಗಿಲ್ಲ. ಸಂಜೆಯ ವೇಳೆ ಗ್ರಾಮಾಂತರ ಪ್ರದೇಶಗಳಲ್ಲಿ ಹಲವೆಡೆ ಗುಡುಗು ಸಹಿತ ಸಾಧಾರಣ ಮಳೆಯಾಗಿದೆ. ಅಲ್ಲದೆ ಬಹುತೇಕ ಮೋಡ ಕವಿದ ವಾತಾವರಣವಿತ್ತು.

ಸದ್ಯ ಹವಾಮಾನ ಇಲಾಖೆಯು ಜು.9ರಿಂದ ಕರಾವಳಿಯಲ್ಲಿ ಆರೆಂಜ್ ಅಲರ್ಟ್‌ನ ಮುನ್ಸೂಚನೆ ನೀಡಿದೆ. ದಿನದ ಗರಿಷ್ಠ ತಾಪಮಾನ 29.5 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 24.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News