ಮಾಣಿ : ಸೋಶಿಯಲ್ ಇಖ್ವಾ ಫೆಡರೇಶನ್ ವತಿಯಿಂದ ಆಂಬುಲೆನ್ಸ್ ಸೇವಾರ್ಪಣೆ, ರಕ್ತದಾನ ಶಿಬಿರ

Update: 2021-07-08 12:13 GMT

ವಿಟ್ಲ : ಮಾಣಿ ಸೋಶಿಯಲ್ ಇಖ್ವಾ ಫೆಡರೇಶನ್ ವತಿಯಿಂದ ಆಂಬುಲೆನ್ಸ್ ಸೇವಾರ್ಪಣೆ ಮತ್ತು ಕೆ.ಎಮ್.ಸಿ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ರಕ್ತದಾನ ಶಿಬಿರ ಗುರುವಾರ ನೇರಳಕಟ್ಟೆಯ ಇಂಡಿಯನ್ ಆಡಿಟೋರಿಯಂ ನಲ್ಲಿ ನಡೆಯಿತು.

ದಿ. ಹಾಜಿ ಬಿ.ಹುಸೈನ್ (ಸುಲ್ತಾನ್) ಕೊಡಾಜೆ ಸ್ಮರಣಾರ್ಥ ಅಂಬುಲೆನ್ಸ್ ಸೇವೆಯನ್ನು ಅವರ ಪುತ್ರ ಉಮ್ಮರ್ ಫಾರೂಕ್ ಸೇವಾರ್ಪಣೆಗೈದರು. ಸೋಶಿಯಲ್ ಇಖ್ವಾ ಫೆಡರೇಶನ್ ಅಧ್ಯಕ್ಷ ಅಬ್ದುಲ್ ರಹ್ಮಾನ್ ಸುಲ್ತಾನ್ ಅಧ್ಯಕ್ಷತೆ ವಹಿಸಿದ್ದರು.

ರಕ್ತದಾನ ಶಿಬಿರವನ್ನು ಉದ್ಘಾಟಿಸಿದ ಮಾಣಿ ಶ್ರೀ ಪದ್ಮಾ ಕ್ಲಿನಿಕ್ ನ ಡಾ. ಶ್ರೀನಾಥ್ ಆಳ್ವ  ಮಾತನಾಡಿ ಯುವ ಸಮುದಾಯ ಸಮಾಜಮುಖಿ ಚಟುವಟಿಕೆಗಳಲ್ಲಿ  ತೊಡಗಿಳ್ಳುತ್ತಿರುವುದು ಶ್ಲಾಘನೀಯ ಎಂದರು.

ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀಪ್ ಕುಮಾರ್ ಶೆಟ್ಟಿ, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ, ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ ಕೊಪ್ಪರಿಗೆ, ಮುಸ್ಲಿಂ ಸೆಂಟ್ರಲ್ ಕಮಿಟಿ ಸದಸ್ಯ ಹನೀಫ್ ಖಾನ್ , ಮಿಲ್ಲತ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಜಿ ಉಮ್ಮರ್ ರಾಜ್ ಕಮಲ್, ಹಾಜಿ ಮುಹಮ್ಮದ್ ರಫೀಕ್ ಸುಲ್ತಾನ್, ಎಸ್ಡಿಪಿಐ ಜಿಲ್ಲಾ ಕಾರ್ಯದರ್ಶಿ ಶಾಹುಲ್ ಹಮೀದ್, ಬರಿಮಾರು ಶ್ರೀ ಮಹಮ್ಮಾಯಿ ದೇವಸ್ಥಾನ ಆಡಳಿತ ಮೊಕ್ತೇಸರ ರಾಕೇಶ್ ಪ್ರಭು, ಸೂರಿಕುಮೇರ್ ಚರ್ಚ್ ನ ಮಾಜಿ ಉಪಾಧ್ಯಕ್ಷ ರೋಶನ್ ಮಾರ್ಟಿಸ್ ಪಿ.ಎಫ್.ಐ. ವಿಟ್ಲ ಜಿಲ್ಲಾ ಅಧ್ಯಕ್ಷ ಝಕರಿಯಾ ಗೋಳ್ತಮಜಲು, ದ.ಕ.ಜಿಲ್ಲಾ ವಿಖಾಯ ಚೆಯರ್ಮೇನ್ ಇಸ್ಮಾಯಿಲ್ ತಂಙಳ್ ಉಪ್ಪಿನಂಗಡಿ, ಕರ್ನಾಟಕ ಮುಸ್ಲಿಂ ಜಮಾಅತ್  ಸಹಾಯ್ ರಾಜ್ಯ ಕೋ ಆರ್ಡಿನೇಟರ್ ಅಶ್ರಫ್ ಕಿನಾರ, ಮೊದಲಾದವರು  ಭಾಗವಹಿಸಿದ್ದರು. ರಕ್ತದಾನ ಶಿಬಿರದಲ್ಲಿ 60 ಮಂದಿ ರಕ್ತದಾನಗೈದರು.

ಫೆಡರೇಶನ್ ಕೋಶಾಧಿಕಾರಿ ರಶೀದ್ ಕೋರ್ಯ ಸ್ವಾಗತಿಸಿ, ಕಾರ್ಯದರ್ಶಿ ಝೈನುಲ್ ಅಕ್ಬರ್ ಪ್ರಸ್ತಾವನೆಗೈದರು. ಉಪಾಧ್ಯಕ್ಷ ರಿಯಾಝ್ ಕಲ್ಲಾಜೆ ವಂದಿಸಿ, ಪಿ.ಜೆ.ಅಬ್ದುಲ್ ಅಝೀಝ್ ಗಡಿಯಾರ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News