×
Ad

ತೆಲಂಗಾಣದಲ್ಲಿ ಹೊಸ ಪಕ್ಷ ಆರಂಭಿಸಿದ ವೈ.ಎಸ್.ಶರ್ಮಿಳಾ

Update: 2021-07-08 23:34 IST
photo: The Hindu

 ಹೈದರಾಬಾದ್: ಅಖಂಡ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ, ದಿವಂಗತ ವೈ.ಎಸ್. ರಾಜಶೇಖರ್ ರೆಡ್ಡಿ ಅವರ ಪುತ್ರಿ ಶರ್ಮಿಳಾ ಅವರು ವೈ.ಎಸ್. ಆರ್ ಅವರ ಜನ್ಮದಿನವಾದ ಜುಲೈ 8ರಂದು ಹೊಸ ಪಕ್ಷವನ್ನು ಹುಟ್ಟುಹಾಕಿದ್ದಾರೆ.

ಶುಕ್ರವಾರ ರಾತ್ರಿ ಖಮ್ಮಮ್ ನಲ್ಲಿ ನಡೆದ ಸಂಕಲ್ಪ ಸಭಾ ಎಂಬ ಸಾರ್ವಜನಿಕ ಸಭೆಯಲ್ಲಿ ಹೊಸ ರಾಜಕೀಯ ಪಕ್ಷದ ಹೆಸರು ಹಾಗೂ ಅದರ ಕಾರ್ಯಸೂಚಿಯನ್ನು ಒಂದೇ ದಿನ ಅನಾವರಣಗೊಳಿಸಲಾಯಿತು.

ರೋಡ್ ಶೋ ನಂತರ ಹೈದರಾಬಾದ್‌ನ ಫಂಕ್ಷನ್ ಹಾಲ್‌ನಲ್ಲಿ ಭವ್ಯವಾದ ಲೇಸರ್ ಶೋ ಮತ್ತು ಜನಸಂದಣಿಯ ಸಮ್ಮುಖದಲ್ಲಿ  ವೈ.ಎಸ್. ಶರ್ಮಿಳಾ ಅವರು ವೈಎಸ್ಆರ್ ತೆಲಂಗಾಣ ಪಾರ್ಟಿಯನ್ನು ಆರಂಭಿಸಿದ್ದಾರೆ.

'ರಾಜಣ್ಣ ರಾಜ್ಯಂ' ಅನ್ನು ತೆಲಂಗಾಣಕ್ಕೆ ತರುವುದಾಗಿ ಎಂ.ಎಸ್.ಶರ್ಮಿಳಾ ಅವರು ಹೇಳಿದರು. ತನ್ನ  ತಂದೆ ನೀಡಿದ ಕಲ್ಯಾಣ ಭರವಸೆಗಳನ್ನು ಪೂರೈಸಲು ಮುಂದಡಿ ಇಡುವೆ. ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ಜನರೊಂದಿಗೆ ಸಂವಹನ ನಡೆಸಲು ಮತ್ತು ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು 100 ದಿನಗಳಲ್ಲಿ ಪಾದಯಾತ್ರೆಗೆ ಆರಂಭಿಸುವುದಾಗಿ ಅವರು ಹೇಳಿದರು.

ಈ ಕಾರ್ಯಕ್ರಮದಿಂದ ಶರ್ಮಿಳಾ ಅವರ ಸಹೋದರ, ಆಂಧ್ರ ಸಿಎಂ ಜಗನ್ ಮೋಹನ್  ರೆಡ್ಡಿ ದೂರ ಉಳಿದಿದ್ದರು. ವೇದಿಕೆಯಲ್ಲಿ ಶರ್ಮಿಳಾ ಅವರ ತಾಯಿ ವಿಜಯಮ್ಮ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News