ಸೌರವ್ ಗಂಗುಲಿ ನಿವಾಸಕ್ಕೆ ತೆರಳಿ ಜನ್ಮದಿನದ ಶುಭಾಶಯ ಕೋರಿದ ಮಮತಾ ಬ್ಯಾನರ್ಜಿ
Update: 2021-07-08 23:53 IST
ಕೋಲ್ಕತಾ: ಮಮತಾ ಬ್ಯಾನರ್ಜಿ ಅವರು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗುಲಿ ಅವರ ಜನ್ಮದಿನಕ್ಕೆ ಯಾವಾಗಲೂ ಶುಭ ಹಾರೈಸುತ್ತಾರೆ, ಗುರುವಾರ 49 ನೇ ಹುಟ್ಟುಹಬ್ಬ ಆಚರಿಸಿದ ಗಂಗುಲಿಗೆ ದೀದಿ ವಿಶೇಷವಾಗಿ ಶುಭ ಹಾರೈಸಿದರು.
ಗುರುವಾರ ಸಂಜೆ 5 ಗಂಟೆಗೆ, ಮಮತಾ ಬ್ಯಾನರ್ಜಿ ಅವರು ದಾದಾ ಖ್ಯಾತಿಯ ಸೌರವ್ ಗಂಗೂಲಿ ಅವರ ಮನೆಗೆ ತೆರಳಿದರು.- ಹಳದಿ ಗುಲಾಬಿಗಳ ಗುಚ್ಛ ಹಾಗೂ ಸಿಹಿತಿಂಡಿಗಳ ಪೆಟ್ಟಿಗೆಯನ್ನು ನೀಡಿದರು.
ಭಾರತದ ಮಾಜಿ ಕ್ರಿಕೆಟ್ ನಾಯಕ ಗಂಗುಲಿ ಮಕ್ಕಳ ಹುಟ್ಟುಹಬ್ಬದ ಪಾರ್ಟಿಗಳಂತೆಯೇ ಮಮತಾ ಅವರಿಗೆ ಪ್ರತಿಯಾಗಿ ಉಡುಗೊರೆಯೊಂದನ್ನು ನೀಡಿದರು ಎಂದು ಮೂಲಗಳು NDTVಗೆ ತಿಳಿಸಿವೆ.
ನೈಋತ್ಯ ಕೋಲ್ಕತ್ತಾದ ಗಂಗುಲಿಯ ಮನೆಯಿಂದ ಮುಖ್ಯಮಂತ್ರಿ ನಿರ್ಗಮಿಸಿದ ಕೆಲವೇ ನಿಮಿಷಗಳಲ್ಲಿ, ರಾಜ್ ಭವನದಿಂದ ಗಂಗುಲಿಗೆ ಪುಷ್ಪಗುಚ್ಚ ವೊಂದನ್ನು ಹೊತ್ತ ವಾಹನವೊಂದು ಬಂತು.