×
Ad

ಮಧ್ಯಪ್ರದೇಶ:ಸೇತುವೆಯಿಂದ ಕೆಳಗೆ ಬಿದ್ದ ಗೂಡ್ಸ್ ರೈಲು

Update: 2021-07-09 23:42 IST
ಸಾಂದರ್ಭಿಕ ಚಿತ್ರ

ಭೋಪಾಲ್: ಮಧ್ಯಪ್ರದೇಶದ ಅನುಪ್ಪೂರ್ ಬಳಿ ಹಳಿ ತಪ್ಪಿದ ಪರಿಣಾಮವಾಗಿ ಸರಕು ರೈಲಿನ ಹದಿನಾರು ಬೋಗಿಗಳು ಸೇತುವೆಯಿಂದ ಕೆಳಗೆ ಬಿದ್ದಿವೆ. ಕಲ್ಲಿದ್ದಲು ಹೊತ್ತ ರೈಲು ಛತ್ತೀಸ್‌ಗಢ ದ ಕೊರ್ಬಾದಿಂದ ಮಧ್ಯಪ್ರದೇಶದ ಕಾಟ್ನಿಗೆ ತೆರಳುತ್ತಿತ್ತು ಪ್ರಾಥಮಿಕ ವರದಿಗಳ ಪ್ರಕಾರ, ಅಲನ್ ನದಿಯ ಸೇತುವೆಯ ಮೇಲಿರುವ ರೈಲ್ವೆ ಹಳಿ ಬಿರುಕುಬಿಟ್ಟಿದ್ದರಿಂದಾಗಿ ರೈಲಿನ ಹಲವಾರು ಬೋಗಿಗಳು ಕೆಳಗಿನ ಆಳವಿಲ್ಲದ ನದಿಯಲ್ಲಿ ಬಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಹಾಗೂ  ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ವೀಡಿಯೊವೊಂದರಲ್ಲಿ ಹಲವಾರು ಹಾನಿಗೊಳಗಾದ ಬೋಗಿಗಳು ಕೆಳಗೆ ಬಿದ್ದಿದ್ದು, ಇನ್ನೂ ಕೆಲವು ಸೇತುವೆಯಿಂದ ನೇತಾಡುತ್ತಿರುವುದು ಕಂಡುಬಂದಿದೆ. ಸೇತುವೆಯ ಮೇಲೆ ಮತ್ತು ಕೆಳಗಿನ ನೀರಿನಲ್ಲಿ ಕಲ್ಲಿದ್ದಲು ಚೆಲ್ಲಿ ಬಿದ್ದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News