ಬಿಜೆಪಿ ನಾಯಕರ ಮುಂದೆ ಕೈ ಮುಗಿದು ವಿನಂತಿಸುತ್ತಿರುವ ಉತ್ತರಪ್ರದೇಶ ಪೊಲೀಸ್:‌ ವೀಡಿಯೊ ವೈರಲ್‌

Update: 2021-07-10 13:00 GMT
Screengrab(Twitter/@pankajjha_)

ಲಕ್ನೋ: ʼದಯವಿಟ್ಟು ನಿಮ್ಮ ಕಾರ್ಯಕರ್ತರಿಗೆ ಹಿಂಸೆಯನ್ನು ನಿಲ್ಲಿಸುವಂತೆ ಹೇಳಿʼ ಎಂದು ಉತ್ತರಪ್ರದೇಶದ ಪೊಲೀಸ್ ಅಧಿಕಾರಿಯೋರ್ವರು ಬಿಜೆಪಿ ನಾಯಕರ ಮುಂದೆ ಕೈ ಮುಗಿದು ವಿನಂತಿರುಸತ್ತಿರುವ ವೀಡಿಯೋವೊಂದು ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದೆ. ಇಟಾವಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ವೀಡಿಯೋದಲ್ಲಿ ಪೊಲೀಸ್‌ ಅಧಿಕಾರಿಯು ಬಿಜೆಪಿ ಕಾರ್ಯಕರ್ತರು ತನ್ನ ಕೆನ್ನೆಗೆ ಹೊಡೆದಿರುವ ಕುರಿತು ಬಿಜೆಪಿ ಮುಖಂಡರೊದಿಗೆ ಕೈಮುಗಿದು ಹೇಳುತ್ತಿರುವ ದೃಶ್ಯವು ಸೆರೆಯಾಗಿದೆ. ಪೊಲೀಸ್‌ ಅಧಿಕಾರಿಯ ಬಳಿ ನೂರಾರು ಪೊಲೀಸರ ಬಲವಿದ್ದರೂ ಅವರು ಅಸಹಾಯಕರಾಗಿ ನಿಂತಿರುವುದು ಕಾಣಬಹುದಾಗಿದೆ. 

ದೃಶ್ಯದಲ್ಲಿರುವ ಪೊಲೀಸ್‌ ಅಧಿಕಾರಿಯನ್ನು ಎಸ್ಪಿ ಪ್ರಶಾಂತ್‌ ಕುಮಾರ್‌ ಎಂದು ಎಬಿಪಿ ನ್ಯೂಸ್‌ ನ ಸಂಪಾದಕ ಪಂಕಜ್‌ ಝಾ ಗುರುತಿಸಿದ್ದಾರೆ. ʼಇತರ ಸಂದರ್ಭಗಳಲ್ಲಿ ಕಾನ್‌ ಸ್ಟೇಬಲ್‌ ಗಳು ಜನರನ್ನು ಹಿಗ್ಗಾಮುಗ್ಗಾ ಥಳಿಸುತ್ತಾರೆ. ಇಲ್ಲಿ ಬಿಜೆಪಿ ನಾಯಕರ ಮುಂದೆ ಪೊಲೀಸ್‌ ಅಧಿಕಾರಿಗಳು ಅಸಹಾಯಕರಾಗಿ ನಿಂತಿದ್ದಾರೆʼ ಎಂದು ಟ್ವಿಟರ್‌ ನಲ್ಲಿರುವ ವಿಡಂಬನಾ ಖಾತೆಯೊಂದು ಟ್ವೀಟ್‌ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News