ರೋಟರಿ ಕ್ಲಬ್ ಪಡುಬಿದ್ರಿಯ ಅಧ್ಯಕ್ಷ ನಿಯಾಝ್, ತಂಡದ ಪದಪ್ರಧಾನ ಸಮಾರಂಭ

Update: 2021-07-11 07:39 GMT

ಪಡುಬಿದ್ರೆ: ನಮ್ಮ ಸೇವೆಯನ್ನು ಪ್ರೀತಿಸುವ ಮೂಲಕ ಒತ್ತಡದ ಮಧ್ಯೆಯೂ ಸಮಾಜಕ್ಕಾಗಿ ಸೇವೆ ಸಲ್ಲಿಸುವುದ ರಿಂದ ಜೀವನದಲ್ಲಿ ನೆಮ್ಮದಿ ಕಾಣಲು ಸಾಧ್ಯವಾಗುತ್ತದೆ ಎಂದು ರೋಟರಿ ಸಮ್ಮೇಳನ ಅಧ್ಯಕ್ಷ ಅಲೆನ್ ಲೇವಿಸ್ ಹೇಳಿದ್ದಾರೆ.

ಅವರು ಶನಿವಾರ ಪಡುಬಿದ್ರಿಯ ಸಿ.ಎ ಬ್ಯಾಂಕ್‍ನ ವೈ. ಲಕ್ಷ್ಮಣ ಸಭಾಂಗಣದಲ್ಲಿ ರೋಟರಿ ಕ್ಲಬ್‍ನ 2021-22ನೇ ಸಾಲಿನ ಅಧ್ಯಕ್ಷರಾದ ನಿಯಾಝ್ ಮತ್ತು ಮತ್ತು ತಂಡ ಪದಪ್ರಧಾನ ಸಮಾರಂಭದಲ್ಲಿ ಮಾತನಾಡಿದರು.

ಗಣೇಶ್ ಆಚಾರ್ಯ ಉಚ್ಚಿಲ ಸಂಪಾದಕತ್ವದ ರೋಟರಿ ಕ್ಲಬ್‍ನ ಸ್ಪಂಧನ ಸಂಚಿಕೆಯನ್ನು ಝೋನಲ್ ಅಸಿಸ್ಟೆಂಟ್ ಗವರ್ನರ್ ಡಾ. ಅರುಣ್ ಹೆಗ್ಡೆ ಬಿಡುಗಡೆಗೊಳಿಸಿ, ಪ್ರತಿ ವರ್ಷ ವಿಶೇಷ ಕಾರ್ಯಕ್ರಮಗಳೊಂದಿಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸುತಿದ್ದು, ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಿದೆ. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆಯ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ. ಶಾಲಾ ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಕ್ರಮ ಆಯೋಜಿಸುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕೋವಿಡ್ ಸಂದರ್ಭದಲ್ಲಿ ಫ್ರಂಟ್‍ಲೈನ್ ವಾರಿಯರ್ ಆಗಿ ಸೇವೆ ಸಲ್ಲಿಸಿದ ಕಾಪು ತಾಲ್ಲೂಕಿನ ಪತ್ರಕರ್ತರು, ಮೆಸ್ಕಾಂ ಸಿಬ್ಬಂದಿ, ಆಶಾಕಾರ್ಯಕರ್ತರನ್ನು ಸನ್ಮಾನಿಸಲಾಯಿತು.

ಗ್ರಾಮ ಪಂಚಾಯತ್ ಸದಸ್ಯರಾದ ಗಣೇಶ್ ಕೋಟ್ಯಾನ್, ಎಂ.ಎಸ್. ಶಾಫಿ, ಜ್ಯೋತಿ ಮೆನನ್, ಉದ್ಯಮಿ ಶರೀಫ್, ರೂಪ ವಸುಂದರ ಆಚಾರ್ಯರನ್ನು ರೋಟರಿ ಕ್ಲಬ್‍ಗೆ ಹೊಸ ಸದಸ್ಯರನ್ನಾಗಿ ಸೇರ್ಪಡೆಗೊಳಿಸಲಾಯಿತು.

ವಲಯ ಸೇನಾನಿ ಸುರೇಂದ್ರ ನಾಯಕ್ ಉಪಸ್ಥಿತರಿದ್ದರು. ರೋಟರಿ ಕ್ಲಬ್‍ನ ಅಧ್ಯಕ್ಷ ಕೇಶವ ಸಾಲ್ಯಾನ್ ಸ್ವಾಗತಿಸಿದರು. ನಿಯಾಝ್ ವರದಿ ವಾಚಿಸಿದರು. ಸಂತೋಷ್ ಪಡುಬಿದ್ರೆ ಕಾರ್ಯಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ಬಿ.ಎಸ್. ಆಚಾರ್ಯ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News