ಕಾಸರಗೋಡು: ಶ್ವಾಸನಾಳದಲ್ಲಿ ಜೀರುಂಡೆ ಸಿಲುಕಿ ಒಂದು ವರ್ಷದ ಮಗು ಮೃತ್ಯು

Update: 2021-07-11 14:20 GMT
ಸಾಂದರ್ಭಿಕ ಚಿತ್ರ

ಕಾಸರಗೋಡು: ಶ್ವಾಸನಾಳದಲ್ಲಿ ಜೀರುಂಡೆ ಸಿಲುಕಿ ಒಂದು ವರ್ಷದ ಮಗು ಮೃತಪಟ್ಟ ದಾರುಣ ಘಟನೆ ಕಾಸರಗೋಡಿನಲ್ಲಿ ನಡೆದಿದೆ.

ನಗರ ಹೊರವಲಯದ ನುಳ್ಳಿಪ್ಪಾಡಿ ಚೆನ್ನಿಕೆರೆಯ ಸತ್ಯೇ೦ದ್ರ- ರಂಜಿನಿ ದಂಪತಿ ಪುತ್ರ ಅನ್ವೇದ್ ಮೃತ ಮಗು.

ಶನಿವಾರ ರಾತ್ರಿ ಮನೆಯಲ್ಲಿ ಆಟವಾಡುತ್ತಿದ್ದ ಬಾಲಕ ಪ್ರಜ್ಞೆ ತಪ್ಪಿ ಬಿದ್ದಿದ್ದು ಕೂಡಲೇ ಮನೆಯವರು ಆಸ್ಪತ್ರೆಗೆ ತಲಪಿಸಿದರೂ ಮಗು ಮೃತ ಪಟ್ಟಿತ್ತು. ತಪಾಸಣೆಯಿಂದ ಮಗುವಿನ ಸಾವಿಗೆ ಕಾರಣ ತಿಳಿದುಬಂದಿರಲಿಲ್ಲ. ಇದರಿಂದ ಇಂದು ಮಗುವಿನ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಶ್ವಾಸನಾಳದಲ್ಲಿ ಸಣ್ಣ ಜೀರುಂಡೆ ಮರಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಆಟವಾಡುತ್ತಿದ್ದ ಸಂದರ್ಭದಲ್ಲಿ ಮಗು ಜೀರುಂಡೆ ಮರಿಯನ್ನು ನುಂಗಿರಬಹುದು ಎಂದು ಶಂಕಿಸಲಾಗಿದ್ದು, ಇದರಿಂದಲೇ ಮಗು ಉಸಿರುಗಟ್ಟಿ ಮೃತಪಟ್ಟಿರಬಹುದು ಎನ್ನಲಾಗುತ್ತಿದೆ.

ಮಗು ಒಮ್ಮೆಲೇ ಕುಸಿದು ಬಿದ್ದುದ್ದನ್ನು ಕಂಡು ಗಾಬರಿಗೊಂಡ ಮನೆಯವರು ಬೊಬ್ಬೆ ಹಾಕಿದಾಗ ಸ್ಥಳೀಯರು ಆಗಮಿಸಿ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಷ್ಟರಲ್ಲಾಗಲೇ ಮಗು ಮೃತಪಟ್ಟಿತ್ತು ಎಂದು ತಿಳಿದುಬಂದಿದೆ. ಬಳಿಕ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.

ಕಾಸರಗೋಡು ನಗರ ಠಾಣಾ ಪೊಲೀಸರು ಮಹಜರು ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News