ಪದ್ಮ ಪ್ರಶಸ್ತಿಗೆ ಸೂಕ್ತ ವ್ಯಕ್ತಿಗಳ ನಾಮನಿರ್ದೇಶನಕ್ಕೆ ಪ್ರಧಾನಿ ಮೋದಿ ಕರೆ

Update: 2021-07-11 18:22 GMT

ಹೊಸದಿಲ್ಲಿ, ಜು. 10: ಪದ್ಮಪ್ರಶಸ್ತಿಗಳಿಗೆ ತಳಮಟ್ಟದಲ್ಲಿ ಅಸಾಧಾರಣ ಕೆಲಸ ಮಾಡಿದ ಸೂಕ್ತ ವ್ಯಕ್ತಿಯ ನಾಮನಿರ್ದೇಶನ ಮಾಡಿ ಅಥವಾ ಹೆಸರು ಸೂಚಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ‘‘ಭಾರತದಲ್ಲಿ ಹಲವು ಪ್ರತಿಭಾವತರಿದ್ದಾರೆ. ಅಂತವರು ತಳಮಟ್ಟದಲ್ಲಿ ಸಾಧನೆ ಹಾಗೂ ಕೆಲಸಗಳನ್ನು ಮಾಡುತ್ತಿದ್ದಾರೆ. ಆದರೆ, ಅವರು ಬೆಳಕಿಗೆ ಬಂದಿರುವುದಿಲ್ಲ. ಅಂತಹ ಸ್ಫೂರ್ತಿ ತುಂಬುವ ಹಾಗೂ ಬೇರೆಯವರಿಗೆ ಮಾರ್ಗದರ್ಶನವಾಗಬಲ್ಲ ಜನರ ಬಗ್ಗೆ ನಿಮಗೆ ತಿಳಿದಿದ್ದರೆ, ನೀವು ಅಂತವರವನ್ನು ಪದ್ಮ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಿ’’ ಎಂದು ಪ್ರಧಾನಿ ತಿಳಿಸಿದ್ದಾರೆ.

#peoplespadma ಹ್ಯಾಷ್ಟ್ಯಾಗ್ ಬಳಸಿ ಪ್ರತಿಭಾವಂತರ ಹೆಸರನ್ನು ನಾಮನಿರ್ದೇಶನ ಮಾಡಿ. ನಾಮನಿರ್ದೇಶನ ಸೆಪ್ಟಂಬರ್ 15ರ ವರೆಗೆ ತೆರೆದಿರುತ್ತದೆ ಎಂದು ಪ್ರಧಾನಿ ಮೋದಿ ಅವರು ಸರಕಾರದ ಪದ್ಮ ಪ್ರಶಸ್ತಿಯ ವೆಬ್ಸೈಟ್ (http://padmaawards.gov.in) ಲಿಂಕ್ ಅನ್ನು ಟ್ವೀಟ್ನೊಂದಿಗೆ ಹಂಚಿಕೊಂಡಿದ್ದಾರೆ.

ಪದ್ಮವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರೀ ದೇಶದ ಅತ್ಯುಚ್ಚ ನಾಗರಿಕ ಪದ್ಮ ಪ್ರಶಸ್ತಿಗಳು. ಸಮಾಜಕ್ಕೆ ನೀಡಿದ ಜೀವ ಮಾನ ಕೊಡುಗೆಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಾಗಿ ಪದ್ಮಪ್ರಶಸ್ತಿ ನೀಡಲಾಗುತ್ತದೆ. 1954ರಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಯನ್ನು ಪ್ರತಿವರ್ಷ ಗಣರಾಜ್ಯೋತ್ಸವದ ದಿನ ಘೋಷಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News