×
Ad

ನಟ ಸುನೀಲ್ ಶೆಟ್ಟಿ ಅಪಾರ್ಟ್ ಮೆಂಟ್ ʼಸೀಲ್‌ʼ ಮಾಡಿದ ಬಿಎಂಸಿ

Update: 2021-07-12 13:57 IST

ಮುಂಬೈ: ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳಿಂದಾಗಿ ನಟ ಸುನೀಲ್ ಶೆಟ್ಟಿ ವಾಸವಿರುವ  ಕಟ್ಟಡವೊಂದಕ್ಕೆ ಬೃಹನ್ ಮುಂಬೈ ಮಹಾನಗರ ಪಾಲಿಕೆ ಸೀಲ್  ಹಾಕಿದೆ.

ನಟ ಸುನೀಲ್ ಶೆಟ್ಟಿ ದಕ್ಷಿಣ ಮುಂಬೈನ ಅಲ್ಟಾಮೌಂಟ್ ರಸ್ತೆಯಲ್ಲಿರುವ 'ಪೃಥ್ವಿ ಅಪಾರ್ಟ್ ಮೆಂಟ್' ಎಂಬ ಕಟ್ಟಡದಲ್ಲಿ ವಾಸಿಸುತ್ತಿದ್ದಾರೆ. ಆ ಕಟ್ಟಡದಲ್ಲಿ ಕೊರೋನವೈರಸ್‌ನ ಐದು ಪ್ರಕರಣಗಳಿಂದಾಗಿ ಬಿಎಂಸಿ ಕಟ್ಟಡವನ್ನು ಸೀಲ್  ಮಾಡಿದೆ.

"ಪೃಥ್ವಿ ಅಪಾರ್ಟ್ ಮೆಂಟ್' " ಅನ್ನು ಶನಿವಾರ ಸೀಲ್  ಮಾಡಲಾಗಿದೆ.  ಅಲ್ಲಿ ಜನರಿಗೆ ಬರಲು ಅವಕಾಶವಿರಲಿಲ್ಲ’’ ಎಂದು ಬಿಎಂಸಿಯ ಸಹಾಯಕ ಆಯುಕ್ತ ಪ್ರಶಾಂತ್ ಗಾಯಕ್ವಾಡ್ (ಡಿ ವಾರ್ಡ್) ಇಂದು ಹೇಳಿದ್ದಾರೆ.

ಕಟ್ಟಡವನ್ನು ಸೀಲ್ ಮಾಡಿದ್ದರೂ ಜನರ ಓಡಾಟ ಗೋಚರಿಸುತ್ತಿರುವ ಕುರಿತಾಗಿ  ವರದಿಗಾರರು  ಪ್ರಶ್ನಿಸಿದ ನಂತರ, ಇದು ಕೋವಿಡ್-19 ಪ್ರೋಟೋಕಾಲ್‌ಗಳ ಉಲ್ಲಂಘನೆಯಾಗಿದೆ. ಇಂದಿನಿಂದ ನಾವು ಕಟ್ಟಡದ ಹೊರಗೆ ಪೊಲೀಸರನ್ನು ನಿಯೋಜಿಸುತ್ತೇವೆ. ಇದರಿಂದಾಗಿ ಕಟ್ಟಡದ ಒಬ್ಬ ವ್ಯಕ್ತಿಯೂ ಆವರಣದ ಹೊರಗೆ ಬರುವಂತಿಲ್ಲ ಎಂದು ಗಾಯಕ್ವಾಡ್ ಹೇಳಿದರು.

ನಟ ಸುನೀಲ್  ಶೆಟ್ಟಿ ಅವರ ಇಡೀ ಕುಟುಂಬ ಈ ಕಟ್ಟಡದ 18 ನೇ ಮಹಡಿಯಲ್ಲಿ ವಾಸಿಸುತ್ತಿದೆ. ಸುನೀಲ್ ಶೆಟ್ಟಿಯವರ ಇಡೀ ಕುಟುಂಬವು ಸದ್ಯ ಸುರಕ್ಷಿತವಾಗಿದೆ ಹಾಗೂ  ಅವರಿಗೆ ಏನೂ ಆಗಿಲ್ಲ ಎಂದು ಬಿಎಂಸಿ ಅಧಿಕಾರಿ ತಿಳಿಸಿದ್ದಾರೆ.

ಬಿಎಂಸಿ ಮಾರ್ಗಸೂಚಿಗಳ ಪ್ರಕಾರ, ಯಾವುದೇ ಕಟ್ಟಡದಲ್ಲಿ 5 ಕೋವಿಡ್  -19 ಪ್ರಕರಣಗಳು ಕಂಡುಬಂದಲ್ಲಿ, ಆ ಕಟ್ಟಡವನ್ನು ಮೈಕ್ರೊ ಕಂಟೈನ್ ಮೆಂಟ್  ಪ್ರದೇಶವೆಂದು ಘೋಷಿಸುವ ಮೂಲಕ ಅದನ್ನು ಮುಚ್ಚಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News