ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

Update: 2021-07-14 09:43 GMT
photo: twitter

ಹೊಸದಿಲ್ಲಿ: ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ  ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಮಂಗಳವಾರ ದಿಲ್ಲಿಯಲ್ಲಿ  ಚರ್ಚೆ ನಡೆಸಿರುವ ಚುನಾವಣಾ  ತಂತ್ರಜ್ಞ  ಪ್ರಶಾಂತ್ ಕಿಶೋರ್  ಅವರು  ದೇಶದ ಪ್ರಮುಖ ವಿರೋಧ ಪಕ್ಷಕ್ಕೆ ಸೇರಬಹುದು ಎಂದು ಮೂಲಗಳು ತಿಳಿಸಿವೆ ಎಂದು NDTV ವರದಿ ಮಾಡಿದೆ.

ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ  ಪ್ರಿಯಾಂಕಾ ಗಾಂಧಿಯವರು  ಮಂಗಳವಾರ ರಾಹುಲ್ ಅವರ ನಿವಾಸದಲ್ಲಿ ಪ್ರಶಾಂತ್ ಕಿಶೋರ್ ಅವರೊಂದಿಗೆ ಚರ್ಚೆ ನಡೆಸಿದ್ದರು.

ಈ ಸಭೆಯು ಪಂಜಾಬ್ ಅಥವಾ ಉತ್ತರ ಪ್ರದೇಶದ ಚುನಾವಣೆಗಳ ಬಗ್ಗೆ ಸೀಮಿತವಾಗಿದೆ ಎಂದು ನಂಬಲಾಗಿದ್ದರೂ  ಸಭೆಯ ಹಿಂದೆ ಏನೋ ದೊಡ್ಡ ವಿಚಾರವಿದೆ ಎನ್ನಲಾಗಿದೆ.  2024 ರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಅನ್ನು ಸಿದ್ಧಪಡಿಸುವಲ್ಲಿ ಪ್ರಶಾಂತ್ ಕಿಶೋರ್ ಮಹತ್ವದ ಪಾತ್ರವನ್ನುಎದುರು  ನೋಡುತ್ತಿರಬಹುದು ಎಂಬ ಸೂಚನೆ ಲಭಿಸಿದೆ ಎಂದು NDTV ತಿಳಿಸಿದೆ.

ಎಪ್ರಿಲ್-ಮೇ ನಲ್ಲಿ ನಡೆದಿದ್ದ ಬಂಗಾಳ ಹಾಗೂ  ತಮಿಳುನಾಡು ಚುನಾವಣೆಗಳಲ್ಲಿ  ಟಿಎಂಸಿ ಹಾಗೂ ಡಿಎಂಕೆ ಪಕ್ಷಗಳ  ಗೆಲುವಿಗೆ ರಣನೀತಿ ರೂಪಿಸಿದ್ದ ಕಿಶೋರ್, ತಾನು ಮುಂದುವರಿಯಲು ಬಯಸುತ್ತೇನೆ ಹಾಗೂ  "ಈ ಜಾಗವನ್ನು(ಚುನಾವಣಾ ತಂತ್ರಜ್ಞ) ತ್ಯಜಿಸುತ್ತಿದ್ದೇನೆ" ಎಂದು ಈ ಹಿಂದೆ NDTV ಗೆ ಹೇಳಿದ್ದರು.

ನಾನು ಈಗ ಏನು ಮಾಡುತ್ತಿದ್ದೇನೆ ಅದನ್ನೇ ಮುಂದುವರಿಸಲು ಬಯಸುವುದಿಲ್ಲ. ನಾನು ಸಾಕಷ್ಟುಕೆಲಸ  ಮಾಡಿದ್ದೇನೆ. ನಾನು ವಿರಾಮ ತೆಗೆದುಕೊಂಡು ಜೀವನದಲ್ಲಿ ಬೇರೆ ಏನಾದರೂ ಮಾಡುವ ಸಮಯ ಬಂದಿದೆ. ನಾನು ಈ ಜಾಗವನ್ನು ತ್ಯಜಿಸಲು ಬಯಸುತ್ತೇನೆ "ಎಂದು ಕಿಶೋರ್ ಅವರು ಮೇ ತಿಂಗಳಲ್ಲಿ ವಿಶೇಷ ಸಂದರ್ಶನದಲ್ಲಿ NDTV ಗೆ ತಿಳಿಸಿದ್ದರು,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News