ದಿಲ್ಲಿ ವೃದ್ಧ ಮಹಿಳೆಯ ಮೃತದೇಹ ಕತ್ತರಿಸಿ ಚೀಲದಲ್ಲಿ ಸಾಗಿಸುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Update: 2021-07-14 09:45 GMT

ಹೊಸದಿಲ್ಲಿ: ವೃದ್ಧ ಮಹಿಳೆಯೊಬ್ಬರನ್ನು ಅವರ ನೆರೆಹೊರೆಯವರೇ  ಕೊಂದು ಆಕೆಯ ದೇಹವನ್ನುಕತ್ತರಿಸಿ ಚರಂಡಿಗೆ ಎಸೆದ ಆರೋಪದ ಮೇಲೆ ದಿಲ್ಲಿಯಲ್ಲಿ ಬಂಧಿಸಲ್ಪಟ್ಟ ದಂಪತಿ  ಮೃತದೇಹವನ್ನು ಕತ್ತರಿಸಿದ ನಂತರ ರಕ್ತವನ್ನು ಸ್ವಚ್ಛ ಗೊಳಿಸುವ ಮೂಲಕ ಇಡೀ ರಾತ್ರಿ ವೃದ್ದೆಯ ಮನೆಯಲ್ಲಿ ಕಳೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕತ್ತರಿಸಿದ ಮೃತದೇಹವನ್ನು ಹೊಂದಿದ್ದ ಬ್ಯಾಗ್ ಅನ್ನು  ಇಬ್ಬರು ವ್ಯಕ್ತಿಗಳು ಹೊತ್ತುಕೊಂಡು ಹೋಗುತ್ತಿರುವ ದೃಶ್ಯ ನೆರೆಹೊರೆಯ ಕಟ್ಟಡದ ಹೊರಗಿನ  ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ದಿಲ್ಲಿಯ  ನಜಾಫ್ ಗಢದ ಅನಿಲ್ ಆರ್ಯ  ಎಂಬಾತ ತನ್ನನೆರೆಮನೆಯ  72 ರವಯಸ್ಸಿನ  ಕವಿತಾರಿಂದ ರೂ. 1.5 ಲಕ್ಷ ಸಾಲ ಪಡೆದಿದ್ದ. ಈವೆಂಟ್ ಮ್ಯಾನೇಜ್ಮೆಂಟ್ ವೃತ್ತಿಯಲ್ಲಿರುವ ಅನಿಲ್ ಪತ್ನಿ ಜೂನ್ 30 ರಂದು ರಾತ್ರಿ ಕವಿತಾ ತನ್ನ ಹಣವನ್ನು ಹಿಂದಿರುಗಿಸುವಂತೆ ಕೇಳುತ್ತಿದ್ದರಿಂದ ಕೊಂದಿದ್ದಾಳೆ. ವೃದ್ಧ ಮಹಿಳೆಗೆ ಥಳಿಸಿ, ಕತ್ತು ಹಿಸುಕಿ ಕೊಲೆ ಮಾಡಲಾಗಿತ್ತು..

ವೃದ್ದ ಮಹಿಳೆಯು ಮನೆಯಲ್ಲಿ ಒಬ್ಬಂಟಿಯಾಗಿರುವಾಗ ಈ ಕೃತ್ಯ  ನಡೆದಿದೆ.

ಕೊಲೆಯ ಬಳಿಕ  ದಂಪತಿ ವೃದ್ಧೆಯ ದೇಹವನ್ನು ಮೂರು ತುಂಡುಗಳಾಗಿ ಕತ್ತರಿಸಿ ಮೂರು ಚೀಲಗಳಲ್ಲಿ ತುಂಬಿಸಿ ನಜಾಫ್ ಗಢ ಚರಂಡಿಗೆ ಎಸೆದರು ಎಂದು ಹಿರಿಯ ಪೊಲೀಸ್ ಅಧಿಕಾರಿ ಸಂತೋಷ್ ಕುಮಾರ್ ಮೀನಾ NDTVಗೆ ತಿಳಿಸಿದ್ದಾರೆ.

ಜೂನ್ 30 ರಿಂದ ಮರುದಿನ ಬೆಳಿಗ್ಗೆ 5 ರಿಂದ ಸಂಜೆ 9 ರವರೆಗೆ ದಂಪತಿ ತಮ್ಮ ನೆರೆಯ ಮನೆಯಲ್ಲಿದ್ದರು.

ಶವವನ್ನು ಚರಂಡಿಗೆ ಎಸೆಯುವ ಮೊದಲು ಮಹಿಳೆಯ ದೇಹದಿಂದ ಆಭರಣಗಳನ್ನು ತೆಗೆದರು. ಜನಪ್ರಿಯ ಹಣಕಾಸು ಕಂಪನಿಯೊಂದರಲ್ಲಿ ಆಭರಣವನ್ನು ಅಡವಿಟ್ಟು,  ಪ್ರತಿಯಾಗಿ ರೂ. 70,000 ತೆಗೆದುಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.

ದಂಪತಿಯನ್ನು ಉತ್ತರ ಪ್ರದೇಶದ ಬರೇಲಿಯಲ್ಲಿ ಪತ್ತೆ ಹಚ್ಚಿ ಸೋಮವಾರ ಬಂಧಿಸಲಾಗಿದೆ. ಪೊಲೀಸರು ಅದೇ ದಿನ ಮಹಿಳೆಯ ಶವವನ್ನು ಚರಂಡಿಯಿಂದ ವಶಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News