×
Ad

ಪತಂಜಲಿ ಟ್ರಸ್ಟ್ ಗೆ ಐದು ವರ್ಷ ತೆರಿಗೆ ವಿನಾಯಿತಿ ನೀಡಿದ ಸರಕಾರ

Update: 2021-07-14 16:02 IST

ಹೊಸದಿಲ್ಲಿ : ಪತಂಜಲಿ ರಿಸರ್ಚ್ ಫೌಂಡೇಶನ್ ಟ್ರಸ್ಟ್ ಅನ್ನು  ಒಂದು ಸಂಶೋಧನಾ ಸಂಸ್ಥೆ ಎಂದು ಪರಿಗಣಿಸಿ ಆದಾಯ ತೆರಿಗೆ ಇಲಾಖೆ ಅದಕ್ಕೆ ಐದು ವರ್ಷಗಳ ಅವಧಿಗೆ ತೆರಿಗೆ ವಿನಾಯಿತಿ ಮಂಜೂರುಗೊಳಿಸಿದೆ.

ಜುಲೈ 12ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ ಕೇಂದ್ರ ನೇರ ತೆರಿಗೆಗಳ ಮಂಡಳಿ ಈ ಕುರಿತು ಮಾಹಿತಿ ನೀಡಿದೆ. ಅದರಲ್ಲಿ ಕೇಂದ್ರ ಸರಕಾರ ಪತಂಜಲಿ ಟ್ರಸ್ಟ್ ಅನ್ನು ವೈಜ್ಞಾನಿಕ ಸಂಶೋಧನೆಗಳ ಉದ್ದೇಶದ ಸಂಶೋಧನಾ ಸಂಸ್ಥೆ ಎಂದು ಅನುಮೋದನೆ ನೀಡಿದೆ ಎಂದು ವಿವರಿಸಲಾಗಿದೆ. 

ಈ ಅಧಿಸೂಚನೆಯನ್ನು ಅಧಿಕೃತ ಗಜೆಟ್‍ನಲ್ಲಿ ಪ್ರಕಟಗೊಂಡ ದಿನದಿಂದ  ಅದು  ಅನ್ವಯವಾಗಲಿದೆ ಹಾಗೂ ಅಸೆಸ್ಮೆಂಟ್ ವರ್ಷ 2022-23ರಿಂದ 2027-28 ತನಕ  ಜಾರಿಯಲ್ಲಿರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News