×
Ad

ಕೊರೋನದ ಎರಡನೇ ಅಲೆ ಇನ್ನೂ ಮುಗಿದಿಲ್ಲ: ಎಲ್ಲ ರಾಜ್ಯಗಳಿಗೆ ಕೇಂದ್ರ ಎಚ್ಚರಿಕೆ

Update: 2021-07-14 18:34 IST

ಹೊಸದಿಲ್ಲಿ: ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಬುಧವಾರ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಸಾರ್ವಜನಿಕರು ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಹಾಗೆ ನೋಡಿಕೊಳ್ಳುವಂತೆ ಕೋರಿದ್ದಾರೆ.

"ದೇಶದ ಹಲವಾರು ಭಾಗಗಳಲ್ಲಿ, ವಿಶೇಷವಾಗಿ ಸಾರ್ವಜನಿಕ ಸಾರಿಗೆ ಹಾಗೂ  ಗಿರಿಧಾಮಗಳಲ್ಲಿ ಕೋವಿಡ್ ಮಾನದಂಡಗಳ ಉಲ್ಲಂಘನೆಯನ್ನು ಗಮನಿಸಲಾಗಿದೆ" ಎಂದು ಭಲ್ಲಾ ಪತ್ರದಲ್ಲಿ ಬರೆದಿದ್ದಾರೆ.

"ಕೋವಿಡ್‌ನ ಎರಡನೇ ಅಲೆ ಇನ್ನೂ ಮುಗಿದಿಲ್ಲ ಎಂದು ಒತ್ತಿಹೇಳಲಾಗಿದೆ. ವ್ಯಾಕ್ಸಿನೇಷನ್‌ನ ವ್ಯಾಪ್ತಿಯು ಗಣನೀಯವಾಗಿ ಹೆಚ್ಚಾಗುತ್ತಿರುವಾಗ ತೃಪ್ತಿಗೆ ಅವಕಾಶವಿಲ್ಲ. ಆದ್ದರಿಂದ ಕೋವಿಡ್ ಸೂಕ್ತ ನಡವಳಿಕೆಯನ್ನು ಮುಂದುವರಿಸಬೇಕು" ಎಂದು ಎಲ್ಲಾ ರಾಜ್ಯಗಳು  ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದ ಪತ್ರದಲ್ಲಿ ಭಲ್ಲಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News