ಹೆದ್ದಾರಿಯನ್ನು ಸುಸ್ಥಿತಿಗೆ ತನ್ನಿ

Update: 2021-07-14 17:47 GMT

ಮಾನ್ಯರೇ,

ಉಡುಪಿಯ ಕರಾವಳಿ ಬೈಪಾಸ್, ಆದಿಉಡುಪಿ ಮುಂತಾದ ಕಡೆ ಹೆದ್ದಾರಿ ಗುಂಡಿಗಳಿಂದ ತುಂಬಿದೆ. ಮಳೆಗಾಲ ಕಾಲಿಡುವ ಮೊದಲು ಈ ಹೆದ್ದಾರಿಯಲ್ಲಿದ್ದ ಸಣ್ಣ ಪುಟ್ಟ ಕುಳಿಗಳು ಇತ್ತೀಚಿನ ಕೆಲವೇ ದಿನಗಳ ಮಳೆಗೆ ಹೊಂಡಗಳಾಗುತ್ತಿವೆ. ಅಗಲೀಕರಣದ ಪಟ್ಟಿಯಲ್ಲಿರುವ ಈ ಹೆದ್ದಾರಿಯನ್ನು ಈಚೆಗೆ ರಿಪೇರಿ ಮಾಡುವ ಗೋಜಿಗೇ ಹೋಗುತ್ತಿಲ್ಲ. ಲಾಕ್‌ಡೌನ್ ಸಮಯದಲ್ಲಿ ಈ ಹೆದ್ದಾರಿಯ ಹೊಂಡಗುಂಡಿಗಳನ್ನು ಮುಚ್ಚಿ ಒಂದಿಷ್ಟು ಸರಿಪಡಿಸಬಹುದಿತ್ತು. ಆದರೆ ಜನಪ್ರತಿನಿಧಿಗಳೆಲ್ಲ ‘ಹಡಿಲು ಭೂಮಿ’ ಆಂದೋಲನದಲ್ಲಿಯೇ ಇದುವರೆಗೂ ನಿರತರಾಗಿರುವುದರಿಂದ ಈ ಬಗ್ಗೆ ಗಮನಹರಿಸಲು ಸಮಯವಿಲ್ಲವೆನಿಸುತ್ತಿದೆ.

ಹಲವು ವರ್ಷಗಳಿಂದ ಅಗಲೀಕರಣವಾಗದೆ ನನೆಗುದಿಗೆ ಬಿದ್ದಿರುವ ಈ ‘ರಾಷ್ಟ್ರೀಯ’ ಹೆದ್ದಾರಿಗೆ ಇತ್ತೀಚೆಗೆ ಅಗಲೀಕರಣ ಕಾಮಗಾರಿಗೆ ಹಸಿರು ನಿಶಾನೆ ಸಿಕ್ಕಿದೆ. ಇನ್ನಾದರೂ ಶೀಘ್ರದಲ್ಲಿ ಈ ಹೆದ್ದಾರಿ ಕಾಮಗಾರಿ ಆರಂಭಿಸಿ ಈ ರಸ್ತೆಯಲ್ಲಾಗುವ ದಿನನಿತ್ಯದ ವಾಹನ ದಟ್ಟಣೆಯನ್ನು ನಿಲ್ಲಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿದೆ.

Writer - -ಎಂ. ಕೆ. ಕಾಂಚನ್, ಆದಿಉಡುಪಿ

contributor

Editor - -ಎಂ. ಕೆ. ಕಾಂಚನ್, ಆದಿಉಡುಪಿ

contributor

Similar News