ಕೈಕಂಬದ ರೋಸಾ ಮಿಸ್ತಿಕಾ ಶಾಲೆಯಲ್ಲಿ ಬೆಥನಿ ಸಂಸ್ಥಾಪನಾ ದಿನಾಚರಣೆ

Update: 2021-07-15 15:40 GMT

ಗುರುಪುರ, ಜು.15: ಗುರುಪುರ ಕಿನ್ನಿಕಂಬಳದ (ಕೈಕಂಬ) ಬೆಥನಿ ಸಂಸ್ಥೆಯ ರೋಸಾ ಮಿಸ್ತಿಕಾ ಪ್ರೌಢ ಶಾಲೆಯಲ್ಲಿ ಗುರುವಾರ ಬೆಥನಿ ಸಂಸ್ಥಾಪನಾ ದಿನಾಚರಣೆ ಹಾಗೂ ಬೆಥನಿ ಸಂಸ್ಥೆಯ ಶತಮಾನ ಆರಂಭೋತ್ಸವ ಸಭೆ ನಡೆಯಿತು.

ಶಾಲಾ ಸಂಚಾಲಕಿ ಸಿಸ್ಟರ್ ಮಾರಿ ಬೆಲ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ರೋಸಾಮಿಸ್ತಿಕಾ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಲೊಲಿಟಾ ಪಿರೇರಾ ಮಾತನಾಡಿ ಫಾ. ರೇಮಂಡ್ ಮಸ್ಕರೇನಸ್ ಅವರಿಂದ ಸ್ಥಾಪಿಸ ಲ್ಪಟ್ಟಿರುವ ಬೆಥನಿ ಸಂಸ್ಥೆ ಹಾಗೂ ಬೆಥನಿ ವಿದ್ಯಾ ಸಂಸ್ಥೆಗಳಿಗೆ ಜು. 16ಕ್ಕೆ ನೂರು ವರ್ಷ ತುಂಬುತ್ತದೆ. ಈಗ ದೇಶವಿದೇಶಗಳಲ್ಲಿ ಬೆಥನಿ ವಿದ್ಯಾ ಸಂಸ್ಥೆ, ವೃದ್ಧಾಶ್ರಮ, ಅನಾಥಾಶ್ರಮ, ವೈದ್ಯಕೀಯ ಕೇಂದ್ರಗಳು ಕಾರ್ಯನಿರತವಾಗಿವೆ ಎಂದರು.

ಶಾಲಾ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ವಿಲ್ಫ್ರೆಡ್ ಮಿನೆಜಸ್ ಮಾತನಾಡಿ ಈ ಬಾರಿ ಯಾವುದೇ ಅದ್ದೂರಿ ಕಾರ್ಯಕ್ರಮ ಸಾಧ್ಯವಿಲ್ಲ ದಿದ್ದರೂ, ಸಂಘದ ಸದಸ್ಯರು ಹಾಗೂ ದಾನಿಗಳ ನೆರವಿನಿಂದ ಶಾಲೆಯ ಸುಮಾರು 50 ಬಡ ವಿದ್ಯಾರ್ಥಿಗಳಿಗೆ ಅರ್ಧದಷ್ಟು ಶುಲ್ಕ ನೀಡಲು ಸಹಕರಿಸಲಾಗುವುದು ಎಂದರು.

ಶಾಲೆಯ ಮಾಜಿ ಸಂಚಾಲಕಿ ಸಿಸ್ಟರ್ ಕನ್ಸೆಟ್ಟಾ ಬಿಎಸ್, ಸಂಸ್ಥೆಯ ಆಪ್ತ ಸಮಾಲೋಚಕಿ ಸಿಸ್ಟರ್ ಜ್ಯೂಲಿಯೆಟ್, ಶಿಕ್ಷಕರಾದ ಸಬಿನಾ ಕ್ರಾಸ್ತ, ಐಡಾ ಪಿರೇರಾ, ಅಶ್ರಿತಾ ಗೋನ್ಸಾಲ್ವಿಸ್, ಹಳೆ ವಿದ್ಯಾರ್ಥಿ ಸಂಘದ ಕಾರ್ಯಕಾರಿಣಿ ಸಮಿತಿ ಸದಸ್ಯ, ಸುನಿಲ್ ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಕರಾದ ವಿನ್ಸೆಂಟ್ ಮಿನೆಜಸ್ ಸ್ವಾಗತಿಸಿದರು. ಲ್ಯಾನ್ಸಿ ಸಿಕ್ವೇರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News