ಉಕ್ಕುಡ ಪಬ್ಲಿಕ್ ಸ್ಕೂಲ್ ಶಿಕ್ಷಕ-ರಕ್ಷಕರ ಸಭೆ

Update: 2021-07-15 15:45 GMT

ಉಕ್ಕುಡ ಪಬ್ಲಿಕ್ ಸ್ಕೂಲ್ ಇದರ ಶಿಕ್ಷಕ ರಕ್ಷಕರ ಸಭೆಯು ಶಾಲಾ ವಠಾರದಲ್ಲಿ ಗುರುವಾರ ನಡೆಯಿತು.

ಕೋವಿಡ್ ಸಂದರ್ಭದ ಕಷ್ಟ ನಷ್ಟಗಳು, ಶಿಕ್ಷಣದ ಕುಂಠಿತ ಹಾಗೂ ಅದರ ಪರಿಹಾರದ ಕುರಿತು ಬಿ.ಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಅಬ್ದುಲ್ ರಝಾಕ್ ಅನಂತಾಡಿ ಮಾಹಿತಿ ನೀಡಿದರು.

ಉಕ್ಕುಡ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ರಶೀದ್ ವಿಟ್ಲ ಅಧ್ಯಕ್ಷತೆ ವಹಿಸಿ ಪಾಲಕರ ಸಂವಾದದಲ್ಲಿ ಪಾಲ್ಗೊಂಡರು. ಜುಲೈ ತಿಂಗಳೊಳಗೆ ನೂತನವಾಗಿ ದಾಖಲಾಗುವ ಪೂರ್ವಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಮೊಬೈಲ್ ಟ್ಯಾಬ್ ಉಚಿತವಾಗಿ ಶಾಲಾ ವತಿಯಿಂದ ವಿತರಿಸಲಿದೆ ಎಂದು ಹೇಳಿದರು.

ಸಂಚಾಲಕ ಅಬೂಬಕರ್ ಟೆಲಿಫೋನ್, ನಿರ್ದೇಶಕ ಹಮೀದ್ ಉಕ್ಕುಡ ಉಪಸ್ಥಿತರಿದ್ದರು. ಪಾಲಕರ ಪರವಾಗಿ ಮೊಯ್ದಿನ್ ಹಾಜಿ ಬೈರಿಕಟ್ಟೆ ಶುಭಾಶಂಸನೆಗೈದರು. ಮುಖ್ಯ ಶಿಕ್ಷಕಿ ಆರಿಫಾ ಸ್ವಾಗತಿಸಿ ಪ್ರಸ್ತಾವನೆಗೈದರು. ಶಿಕ್ಷಕಿ ದಿವ್ಯಾ ವಂದಿಸಿದರು. ಪವಿತ್ರ ನಿರೂಪಿಸಿದರು.

ಜ್ಯೋತ್ಸ್ನಾ, ರಶೀದಾ, ಆಬಿದಾ ಉಪಸ್ಥಿತರಿದ್ದರು. 8ನೇ ತರಗತಿ ಪೂರ್ಣಗೊಳಿಸಿ ಪ್ರೌಢಶಿಕ್ಷಣಕ್ಕಾಗಿ ವರ್ಗಾವಣೆಗೊಂಡ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News