×
Ad

ಸಿಕ್ಕಿಂ ಸಮೀಪ ಕಾಂಕ್ರೀಟ್‌ ಶಿಬಿರ ನಿರ್ಮಿಸಿದ ಚೀನಾ: ವರದಿ

Update: 2021-07-15 23:37 IST
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಭಾರತದೊಂದಿಗಿನ ಸೇನಾ ಬಿಕ್ಕಟ್ಟಿನ ನಡುವೆ ಚೀನಾದ ಸೇನೆಯು ತನ್ನ ಯೋಧರು ತುಂಬಾ ಕಡಿಮೆ ಸಮಯಾವಧಿಯಲ್ಲಿ ವಿವಾದಿತ ಪ್ರದೇಶಕ್ಕೆ ತಲುಪಲು ಅವಕಾಶವೊದಗಿಸಲು ವಾಸ್ತವ ನಿಯಂತ್ರಣ ರೇಖೆ ಸಮೀಪ ಶಾಶ್ವತ ಕಾಂಕ್ರೀಟ್ ಶಿಬಿರ ನಿರ್ಮಿಸಿದೆ ಎಂದು ANI ವರದಿ ಮಾಡಿದೆ.

ಚೀನಾ-ಭಾರತ ಸೈನಿಕರ ನಡುವೆ ಕಳೆದ ವರ್ಷ ಹಾಗೂ ಈ ವರ್ಷದ ಜನವರಿಯಲ್ಲಿ ಘರ್ಷಣೆ ಸಂಭವಿಸಿದ ಪ್ರದೇಶದಿಂದ ಕೆಲವು ನಿಮಿಷಗಳ ಕಾಲ ಸಂಚಾರ ದೂರದ ಉತ್ತರ ಸಿಕ್ಕಿಂ ಪ್ರದೇಶದ ನಾಕೂ ಲಾ ಪ್ರದೇಶದ ಎದುರಿರುವ ಚೀನಾದ ಭೂಭಾಗದ ಒಳಗಡೆ ಕೆಲವು ಕಿಲೋ ಮೀಟರ್ ಗಳಲ್ಲಿ ಒಂದು ಕಾಂಕ್ರೀಟ್ ಕಟ್ಟಡ ಕಂಡುಬಂದಿದೆ ಎಂದು ಸರಕಾರಿ ಮೂಲಗಳು ANI ಗೆ ತಿಳಿಸಿವೆ.

ಮುಂಚೂಣಿ ಪ್ರದೇಶದ ಸಮೀಪ ಪಡೆಗಳನ್ನು ನಿಯೋಜಿಸಲು ಅವಕಾಶ ನೀಡುವ ಶಾಶ್ವತ ಕಾಂಕ್ರೀಟ್ ಕಟ್ಟಡವನ್ನು ಚೀನಾ ನಿರ್ಮಿಸುತ್ತಿದೆ. ಚೀನಾ ಯೋಧರು ಭಾರತದೊಂದಿಗಿನ ಗಡಿ ಪ್ರದೇಶವನ್ನು ಹಿಂದಿಗಿಂತ ಹೆಚ್ಚು ಸುಲಭವಾಗಿ ತಲುಪಲು ರಸ್ತೆ ಮೂಲಭೂತ ಸೌಕರ್ಯ ಕೂಡ ಉತ್ತಮವಾಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News