×
Ad

ಟಿ-ಸೀರೀಸ್ ಮುಖ್ಯಸ್ಥ ಭೂಷಣ್ ಕುಮಾರ್ ವಿರುದ್ಧ ಅತ್ಯಾಚಾರದ ಆರೋಪ, ಪ್ರಕರಣ ದಾಖಲು: ವರದಿ

Update: 2021-07-16 15:10 IST
photo: Wikipedia

ಮುಂಬೈ: ಟಿ-ಸೀರೀಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ, ದಿವಂಗತ ಗುಲ್ಶನ್ ಕುಮಾರ್ ಅವರ ಪುತ್ರ ಭೂಷಣ್ ಕುಮಾರ್ ವಿರುದ್ಧ  ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

30 ವರ್ಷದ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಅಂಧೇರಿ (ಪಶ್ಚಿಮ) ಡಿಎನ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.

ಆದರೆ, ಅಪರಾಧ ಯಾವಾಗ ನಡೆದಿದೆ ಎಂಬ ಕುರಿತಾಗಿ  ಪೊಲೀಸರು ವಿವರಗಳನ್ನು ನೀಡಿಲ್ಲ.

ತನ್ನ ಸ್ವಂತ ಕಂಪನಿಯ ಕೆಲವು ಯೋಜನೆಗಳಲ್ಲಿ  ಮಹಿಳೆಗೆ ಕೆಲಸ ಕೊಡಿಸುವ ಭರವಸೆ ನೀಡಲಾಗಿತ್ತು ಎಂದು ಅಧಿಕಾರಿ ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಕ್ಕೆ ತಿಳಿಸಿದರು.

ತನಗೆ ಮೋಸ ಮಾಡಲಾಗಿದೆ. ಹೀಗಾಗಿ ತಾನು ಪೊಲೀಸರನ್ನು ಸಂಪರ್ಕಿಸಿದ್ದೇನೆ ಎಂದು  ಮಹಿಳೆ ಹೇಳಿದ್ದಾಗಿ  ಪೊಲೀಸರು ತಿಳಿಸಿದ್ದಾರೆ.

ಅಧಿಕಾರಿಯ ಪ್ರಕಾರ, ಭೂಷಣ್ ಕುಮಾರ್ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 376 (ಅತ್ಯಾಚಾರ), 420 (ಮೋಸ)ಹಾಗೂ 506 (ಕ್ರಿಮಿನಲ್ ಬೆದರಿಕೆ)ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News