ಟೋಕಿಯೋ ಗೇಮ್ಸ್: ಒಲಿಂಪಿಕ್ ವಿಲೇಜ್ ನಲ್ಲಿ ಮೊದಲ ಕೋವಿಡ್ ಪ್ರಕರಣ ಪತ್ತೆ
ಟೋಕಿಯೊ: ಟೋಕಿಯೊ ಗೇಮ್ಸ್ ನ ಒಲಿಂಪಿಕ್ ವಿಲೇಜ್ ನಲ್ಲಿ ಮೊದಲ ಕೋವಿಡ್-19 ಪ್ರಕರಣ ಪತ್ತೆಯಾಗಿದೆ ಎಂದು ಟೋಕಿಯೊ ಒಲಿಂಪಿಕ್ಸ್ ಸಂಘಟಕರು ಶನಿವಾರ ಬಹಿರಂಗಪಡಿಸಿದರು.
ಉದ್ಘಾಟನಾ ಸಮಾರಂಭದ ಆರು ದಿನಗಳ ಮೊದಲು, ವ್ಯಕ್ತಿಯೊಬ್ಬರಿಗೆ ಕೊರೋನವೈರಸ್ ಪರೀಕ್ಷೆ ಯಲ್ಲಿ ಪಾಸಿಟಿವ್ ಆಗಿದೆ. ಕ್ರೀಡಾಕೂಟದಲ್ಲಿ ಸಾವಿರಾರು ಕ್ರೀಡಾಪಟುಗಳು ಮತ್ತು ಅಧಿಕಾರಿಗಳು ಇರುತ್ತಾರೆ ಎಂದು ಸಂಘಟಕರು ಹೇಳಿದ್ದಾರೆ.
"ಕ್ರೀಡಾಗ್ರಾಮದಲ್ಲಿ ಒಬ್ಬ ವ್ಯಕ್ತಿ ಮಾತ್ರ ಇದ್ದರು. ಸ್ಕ್ರೀನಿಂಗ್ ಪರೀಕ್ಷೆಯ ಸಮಯದಲ್ಲಿ ವರದಿಯಾದ ಮೊದಲ ಪ್ರಕರಣ ಇದಾಗಿದೆ. ಇದೀಗ ಈ ವ್ಯಕ್ತಿಯು ಹೋಟೆಲ್ ಗೆ ಸೀಮಿತವಾಗಿದ್ದಾರೆ " ಎಂದು ಟೋಕಿಯೊ ಸಂಘಟನಾ ಸಮಿತಿಯ ವಕ್ತಾರ ಮಾಸಾ ಟಕಯಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕೊರೋನ ಸೋಂಕಿಗೆ ಒಳಗಾದ ವ್ಯಕ್ತಿ ವಿದೇಶಿ ಪ್ರಜೆ ಎಂದು ಜಪಾನಿನ ಮಾಧ್ಯಮ ವರದಿ ಮಾಡಿದೆ. ಹೊಸ ಕೊರೋನ ಅಲೆಯ ಭೀತಿಯಲ್ಲಿರುವ ಜಪಾನಿನ ಸಾರ್ವಜನಿಕರು ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.