2 ಡೋಸ್ ಲಸಿಕೆ ಪಡೆದವರಲ್ಲಿ ಸಾವಿನ ಪ್ರಮಾಣ ಕಡಿಮೆ: ಐಸಿಎಂಆರ್ ಅಧ್ಯಯನ ವರದಿ

Update: 2021-07-17 19:14 GMT

ಹೊಸದಿಲ್ಲಿ, ಜು.17: ಡೆಲ್ಟಾ ರೂಪಾಂತರಿತ ಸೋಂಕಿನಿಂದ ಉಂಟಾದ ಕೊರೋನ ಸೋಂಕಿನ 2ನೇ ಅಲೆಯ ಸಂದರ್ಭ ಲಸಿಕೆಯ 2 ಡೋಸ್ ಪಡೆದ ಪೊಲೀಸ್ ಸಿಬ್ಬಂದಿಗಳಲ್ಲಿ 95% ಮಂದಿ ಮರಣ ಹೊಂದುವ ತೀವ್ರ ಅಪಾಯದಿಂದ ಪಾರಾಗಿದ್ದಾರೆ ಎಂದು ಐಸಿಎಂಆರ್ನ ಅಧ್ಯಯನ ವರದಿಯನ್ನು ಉಲ್ಲೇಖಿಸಿ ನೀತಿ ಆಯೋಗದ ಸದಸ್ಯ ಡಾ.ವಿಕೆ ಪಾಲ್ ಶುಕ್ರವಾರ ಹೇಳಿದ್ದಾರೆ.

ತಮಿಳುನಾಡಿನ 1,17,524 ಪೊಲೀಸರ ಮೇಲೆ ಲಸಿಕೆಯ ಪರಿಣಾಮವನ್ನು ಅಧ್ಯಯನ ನಡೆಸಿ ವರದಿ ತಯಾರಿಸಲಾಗಿದೆ. ಇದರಲ್ಲಿ 67,673 ಪೊಲೀಸರು 2 ಡೋಸ್ ಲಸಿಕೆ, 32,792 ಪೊಲೀಸರು ಒಂದು ಡೋಸ್, 17,059 ಪೊಲೀಸರು ಲಸಿಕೆ ಪಡೆದಿರಲಿಲ್ಲ. ಲಸಿಕೆ ಪಡೆಯದವರಲ್ಲಿ 20 ಮಂದಿ ಮೃತಪಟ್ಟಿದ್ದಾರೆ. 1 ಡೋಸ್ ಲಸಿಕೆ ಪಡೆದವರಲ್ಲಿ ಕೇವಲ 7 ಮಂದಿ, 2 ಡೋಸ್ ಪಡೆದವರಲ್ಲಿ 4 ಮಂದಿ ಮರಣ ಹೊಂದಿದ್ದಾರೆ ಎಂದು ಹೊಸದಿಲ್ಲಿಯಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಪಾಲ್ ಹೇಳಿದ್ದಾರೆ. ಒಂದು ಡೋಸ್ ಪಡೆದವರಲ್ಲಿ 82% ಪರಿಣಾಮಕಾರಿತ್ವ, 2 ಡೋಸ್ ಪಡೆದವರಲ್ಲಿ 95% ಪರಿಣಾಮಕಾರಿತ್ವ ಸಾಬೀತಾಗಿದೆ ಎಂದು ಪಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News