ಬಂಟ್ವಾಳ: ಕುರಿ, ಮೇಕೆ ಸಾಕಾಣೆ ತರಬೇತಿ ಕೇಂದ್ರಕ್ಕೆ ಯು.ಟಿ.ಖಾದರ್ ಭೇಟಿ

Update: 2021-07-18 16:12 GMT

ಬಂಟ್ವಾಳ, ಜು.18: ಸರಕಾರದಿಂದ ದೊರಕುವ ವಿವಿಧ ಸವಲತ್ತುಗಳನ್ನು ಸದ್ಭಳಕೆ ಮಾಡಿ ರೈತರು ಪರಂಪರಾಗತವಾದ ಕೃಷಿ ಚಟುವಟಿಕೆ ಗಳೊಂದಿಗೆ ಆಧುನಿಕ ತಂತ್ರಜ್ಞಾನದ ಮಾಹಿತಿಯನ್ನು ಪಡೆದು ಆಡು, ಮೇಕೆ ಸಾಕಾಣಿಕೆಯಂತಹ ಲಾಭದಾಯಕ ಉಪ ಕಸುಬುಗಳಿಗೆ ಉತ್ತೇಜನ ನೀಡಿದಲ್ಲಿ ಯುವ ತಲೆಮಾರಿನ ಜನಾಂಗವು ಕೃಷಿ ಕ್ಷೇತ್ರಕ್ಕೆ ಆಕರ್ಷಿತರಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಶಾಸಕ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. 

ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಪರ್ಲಡ್ಕದ ಐಸಿರಿ ಮೈಂಡ್ ಓವಶನ್ಸ್, ಶಿರೋಹಿ ಫಾರ್ಮ್ಸ್ ವತಿಯಿಂದ ಸರಕಾರದ ಸಹಕಾರದ ಮೂಲಕ ಆರಂಭಗೊಂಡ ಕುರಿ, ಮೇಕೆ ಸಾಕಾಣಿಕಾ ಕೇಂದ್ರ ಮತ್ತು ತರಬೇತಿ ಸಂಸ್ಥೆಗೆ ಭೇಟಿ ನೀಡಿ ಅವರು ಮಾಹಿತಿ ಪಡೆದ ಬಳಿಕ ಮಾತನಾಡಿದರು.

ಬಂಟ್ವಾಳ ತಾಪಂ ನಿಕಟ ಪೂರ್ವ ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ಇರಾ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಬ್ದುಲ್ ರಝಕ್ ಕುಕ್ಕಾಜೆ, ಉಪಾಧ್ಯಕ್ಷ ಮೊಯ್ದು ಕುಂಞಿ, ಸದಸ್ಯರಾದ ಹಮೀದ್ ತಿರ್ತಾಡಿ, ಐಸಿರಿ ಮೈಂಡ್ ಓವಶನ್ಸ್, ಶಿರೋಹಿ ಫಾರ್ಮ್ಸ್ ಸಂಸ್ಥೆಯ ಪ್ರಮುಖರಾದ ಜಯಶ್ರೀ ಕರ್ಕೇರಾ, ಶ್ರೀಕಾಂತ್ ಕರ್ಕೇರಾ, ದಾಮೋದರ್, ಸಂಸ್ಥೆಯ ಸಂಸ್ಥಾಪಕ ಶ್ರೀನಿವಾಸ್ ಗೌಡ, ಪ್ರಮುಖರಾದ ಜಯರಾಜ್ ಇರಾ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News