ಶಸ್ತ್ರಚಿಕಿತ್ಸೆ ಸಮಯದಲ್ಲಿ ಹೊಟ್ಟೆಯೊಳಗೆ ಬಟ್ಟೆ ಮರೆತ ವೈದ್ಯರು: ಮಹಿಳೆ ಪರಿಸ್ಥಿತಿ ಗಂಭೀರ

Update: 2021-07-21 17:18 GMT
photo: AFP, ಸಾಂದರ್ಭಿಕ ಚಿತ್ರ

ಶಹಜಹಾನ್ಪುರ: ಈ ವರ್ಷದ ಜನವರಿಯಲ್ಲಿ ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಇಲ್ಲಿನ ಸರಕಾರಿ ವೈದ್ಯಕೀಯ ಕಾಲೇಜಿನ ವೈದ್ಯರು ಗರ್ಭಿಣಿ ಮಹಿಳೆಯ ಹೊಟ್ಟೆಯೊಳಗೆ ಬಟ್ಟೆಯನ್ನು ಮರೆತು ಬಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

ಗಂಭೀರ ಸ್ಥಿತಿಯಲ್ಲಿ ಕಿಂಗ್ ಜಾರ್ಜ್ ವೈದ್ಯಕೀಯ ಕಾಲೇಜಿನ ಆಘಾತ ಕೇಂದ್ರಕ್ಕೆ ದಾಖಲಾದ ಮಹಿಳೆ ವೆಂಟಿಲೇಟರ್‌ನಲ್ಲಿದ್ದಾರೆ ಎನ್ನಲಾಗಿದೆ.

ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರು ಮೂರು ಸದಸ್ಯರ ವಿಚಾರಣಾ ತಂಡವನ್ನು ರಚಿಸಿದ್ದು ಅದರ ವರದಿಯನ್ನು ಶೀಘ್ರವಾಗಿ ನೀಡುವಂತೆ ಕೋರಲಾಗಿದೆ.

ತಿಲ್ಹಾರ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಮಪುರ ಉತ್ತರದ ನಿವಾಸಿ ಮನೋಜ್ ನೀಡಿದ ದೂರಿನ ಪ್ರಕಾರ ತನ್ನ 30 ರ ಹರೆಯದ ಪತ್ನಿ ನೀಲಂ ಜನವರಿ 6 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಈ ಸಂದರ್ಭದಲ್ಲಿ ಹೊಟ್ಟೆಯಲ್ಲಿ ಬಟ್ಟೆಯೊಂದನ್ನು ಬಿಡಲಾಗಿತ್ತು ಎಂದು ಕಾಲೇಜು ಪ್ರಿನ್ಸಿಪಾಲ್ ರಾಜೇಶ್ ಕುಮಾರ್ ಬುಧವಾರ ಹೇಳಿದ್ದಾರೆ.

ಪುತ್ರಿ ಜನಿಸಿದ ನಂತರ ಅವರ ಪತ್ನಿ ಹೊಟ್ಟೆ ನೋವಿನಿಂದ ದೂರು ನೀಡುತ್ತಿದ್ದರು ಎಂದು ಮಹಿಳೆಯ ಪತಿ ಸುದ್ದಿಗಾರರಿಗೆ ತಿಳಿಸಿದರು.

ಖಾಸಗಿ ವೈದ್ಯರ ಚಿಕಿತ್ಸೆಯಿಂದ ಯಾವುದೇ ಪರಿಹಾರ ಸಿಗದಾಗ ಪತ್ನಿಯನ್ನು ಶಹಜಹಾನ್ಪುರದ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ದಾಖಲಿಸಲಾಯಿತು. ಅಲ್ಲಿ ಸಿಟಿ ಸ್ಕ್ಯಾನ್ ಮೂಲಕ ಆಕೆಯ ಹೊಟ್ಟೆಯಲ್ಲಿ ಬಟ್ಟೆಯೊಂದನ್ನು ಬಿಟ್ಟಿರುವುದು ಗೊತ್ತಾಗಿದೆ. ಅದನ್ನು ಆಪರೇಷನ್ ಮೂಲಕ ತೆಗೆದುಹಾಕಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News