ಲಡಾಖ್‌ನಲ್ಲಿ ಕೇಂದ್ರೀಯ ವಿವಿ ಸ್ಥಾಪನೆಗೆ ಕೇಂದ್ರ ಸಂಪುಟದ ಅಸ್ತು

Update: 2021-07-22 16:23 GMT

ಹೊಸದಿಲ್ಲಿ,ಜು.22: ಕೇಂದ್ರಾಡಳಿತ ಪ್ರದೇಶ ಲಡಾಖ್‌ನಲ್ಲಿ 750 ಕೋ.ರೂ.ವೆಚ್ಚದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯದ ಸ್ಥಾಪನೆಗೆ ಕೇಂದ್ರ ಸಂಪುಟವು ಒಪ್ಪಿಗೆ ನೀಡಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ ಠಾಕೂರ್ ಅವರು ಗುರುವಾರ ಇಲ್ಲಿ ತಿಳಿಸಿದರು.

ಸಮಗ್ರ ಬಹುಉದ್ದೇಶಿತ ನಿಗಮವೊಂದನ್ನು ಲಡಾಖ್‌ನಲ್ಲಿ ಸ್ಥಾಪಿಸುವ ಇನ್ನೊಂದು ಮಹತ್ವದ ನಿರ್ಧಾರವನ್ನೂ ಸಂಪುಟವು ಕೈಗೊಂಡಿದೆ. ಪ್ರದೇಶದಲ್ಲಿ ಕೈಗಾರಿಕೆಗಳು ಮತ್ತು ಪ್ರವಾಸೋದ್ಯಮದ ಅಭಿವೃದ್ಧಿಯನ್ನು ನಿಗಮವು ನೋಡಿಕೊಳ್ಳಲಿದೆ. ಕಂಪನಿಗಳ ಕಾಯ್ದೆಯಡಿ ನಿಗಮವು ಸ್ಥಾಪನೆಯಾಗಲಿದ್ದು, ಮೂಲಸೌಕರ್ಯ ಸ್ಥಾಪನೆಗೆ ನೆರವಾಗಲಿದೆ. ಅದು ಲಡಾಖ್‌ನ ಮುಖ್ಯ ನಿರ್ಮಾಣ ಏಜೆನ್ಸಿಯಾಗಿ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದ ಠಾಕೂರ್,ನಿಗಮಕ್ಕೆ ವಾರ್ಷಿಕ 2.42 ಕೋ.ರೂ.ಗಳ ವೆಚ್ಚವಾಗಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News