ಪೆಗಾಸಸ್ ವಿವಾದದಿಂದ ನುಣುಚಿಕೊಳ್ಳಲು ಸರಕಾರದ ಪ್ರಯತ್ನ: ಖರ್ಗೆ ಟೀಕೆ

Update: 2021-07-22 17:39 GMT

ಹೊಸದಿಲ್ಲಿ, ಜು.22: ಪೆಗಾಸಸ್ ಪ್ರಕರಣದ ಬಗ್ಗೆ ಸಂಸದರಿಗೆ ಮಾತನಾಡಲು ಅವಕಾಶ ನೀಡದ ಸರಕಾರ, ಈ ವಿವಾದದಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ಪೆಗಾಸಸ್ ವಿವಾದದ ಬಗ್ಗೆ ಚರ್ಚೆಗೆ ನಾವು ಆಗ್ರಹಿಸುತ್ತಿದ್ದರೂ ಸರಕಾರ ಹೇಳಿಕೆ ಮಾತ್ರ ನೀಡುತ್ತಿದೆ. ಹೇಳಿಕೆ ನೀಡಿದಾಗ ಸ್ಪಷ್ಟನೆ ಕೇಳಲು ಮಾತ್ರ ಅವಕಾಶವಿದೆ. ಸರಕಾರ ಇದೇ ತಂತ್ರ ಅನುಸರಿಸುತ್ತಿದೆ. ವಿಪಕ್ಷದವರಿಗೆ ಹೇಳಿಕೆ ನೀಡಲು ಅವಕಾಶವನ್ನೇ ನೀಡದೆ, ಈ ವಿವಾದದಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಖರ್ಗೆ ಟೀಕಿಸಿದ್ದಾರೆ. ಪೆಗಾಸಸ್ ಸ್ಪೈವೇರ್ ಬಳಸಿ ಭಾರತದ ಹಲವು ಪತ್ರಕರ್ತರು, ರಾಜಕಾರಣಿಗಳು, ನ್ಯಾಯವಾದಿಗಳು ಹಾಗೂ ಸಾಮಾಜಿಕ ಹೋರಾಟಗಾರರ ಚಟುವಟಿಕೆಯ ಮೇಲೆ ನಿಗಾ ಇರಿಸಲಾಗಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಸರಕಾರದ ವಿರುದ್ಧ ವಿಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News