ಅನಿಲ್ ಅಂಬಾನಿ, ಏರೋ ಸ್ಪೇಸ್ ಉದ್ಯಮದ ಕೆಲವು ಉನ್ನತ ಅಧಿಕಾರಿಗಳು ಪೆಗಾಸಸ್ ಲಿಸ್ಟ್ ನಲ್ಲಿದ್ದರು: ವರದಿ

Update: 2021-07-22 18:15 GMT

ಹೊಸದಿಲ್ಲಿ: ಇಸ್ರೇಲ್ ಬೇಹುಗಾರಿಕೆ ಸಾಫ್ಟ್ ವೇರ್ ಪೆಗಾಸಸ್‌ ಮೂಲಕ ಕಣ್ಗಾವಲಿನ ಸಂಭಾವ್ಯ ಗುರಿಗಳ ಪಟ್ಟಿಯಲ್ಲಿ ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಹಾಗೂ  ಏರೋಸ್ಪೇಸ್ ಉದ್ಯಮದ ಕೆಲವು ಉನ್ನತ ಅಧಿಕಾರಿಗಳ ದೂರವಾಣಿ ಸಂಖ್ಯೆಗಳು ಕಂಡುಬಂದಿವೆ ಎಂದು ಸುದ್ದಿ ಪೋರ್ಟಲ್ "ದಿ ವೈರ್" ವರದಿ ಮಾಡಿದೆ.

2019 ರ ರಾಷ್ಟ್ರೀಯ ಚುನಾವಣೆಗೆ ಮುಂಚಿತವಾಗಿ ರಫೇಲ್ ಯುದ್ದ ವಿಮಾನ ಒಪ್ಪಂದವು ಸಾರ್ವಜನಿಕ ಪರಿಶೀಲನೆಗೆ ಒಳಪಟ್ಟಿದ್ದರಿಂದ ಅಂಬಾನಿ ಹಾಗೂ  ರಿಲಯನ್ಸ್ ಎಡಿಜಿ ಗ್ರೂಪ್‌ನ ಇನ್ನೊಬ್ಬ ಅಧಿಕಾರಿಯ ಸಂಖ್ಯೆಯನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು "ದಿ ವೈರ್" ವರದಿ ಮಾಡಿದೆ.

ಆ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 36 ರಫೇಲ್ ಯುದ್ಧ ವಿಮಾನಗಳಿಗೆ  ಹೆಚ್ಚಿನ ದರದ ಒಪ್ಪಂದವನ್ನು ಇತ್ಯರ್ಥಪಡಿಸಿದ್ದಾರೆ ಎಂದು ಪ್ರತಿಪಕ್ಷದ ಕಾಂಗ್ರೆಸ್ ಆರೋಪಿಸಿತ್ತು.

ಭಾರತದ ಡಸಾಲ್ಟ್ ಏವಿಯೇಷನ್‌ನ ಪ್ರತಿನಿಧಿ ವೆಂಕಟ ರಾವ್ ಪೊಸಿನಾ, ಮಾಜಿ ಸಾಬ್ ಇಂಡಿಯಾ ಮುಖ್ಯಸ್ಥ ಇಂದರ್‌ಜಿತ್ ಸಿಯಾಲ್ ಹಾಗೂ  ಬೋಯಿಂಗ್ ಇಂಡಿಯಾ ಬಾಸ್ ಪ್ರತ್ಯುಷ್ ಕುಮಾರ್ ಅವರ ಫೋನ್ ಸಂಖ್ಯೆ ಕೂಡ ಈ ಪಟ್ಟಿಯಲ್ಲಿದೆ ಎಂದು "ದಿ ವೈರ್" ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News