ನೀಲಿ ಚಿತ್ರ ಪ್ರಕರಣ: ರಾಜ್ ಕುಂದ್ರಾ ಕಸ್ಟಡಿ ಅವಧಿ ಜು. 27ರ ವರೆಗೆ ವಿಸ್ತರಣೆ

Update: 2021-07-23 18:04 GMT

ಮುಂಬೈ, ಜು. 23: ನೀಲಿ ಚಿತ್ರಗಳ ನಿರ್ಮಾಣ ಹಾಗೂ ಪ್ರಸಾರ ಪ್ರಕರಣದಲ್ಲಿ ಬಂಧಿತರಾದ ಮುಂಬೈ ಉದ್ಯಮಿ ರಾಜ್ ಕುಂದ್ರಾ ಹಾಗೂ ಅವರ ಸಹಾಯಕ ರ್ಯಾನ್ ಥೊರ್ಪೆ ಅವರ ಪೊಲೀಸ್ ಕಸ್ಟಡಿಯನ್ನು ಮುಂಬೈ ನ್ಯಾಯಾಲಯ ಜುಲೈ 27ರ ವರೆಗೆ ವಿಸ್ತರಿಸಿದೆ. ರಾಜ್ ಕುಂದ್ರಾ ಹಾಗೂ ಥೊರ್ಪೆಯನ್ನು ಪೊಲೀಸರು ಮುಂಬೈಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ‌

ನೀಲಿ ಚಿತ್ರಗಳಿಂದ ಸಂಗ್ರಹಿಸಿದ ಹಣವನ್ನು ಆನ್ಲೈನ್ ಬೆಟ್ಟಿಂಗ್ ಗೆ ಬಳಸಲಾಗುತ್ತಿತ್ತು ಎಂದು ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆದುದರಿಂದ ರಾಜ್ ಕುಂದ್ರಾ ಅವರ ಯೆಸ್ ಬ್ಯಾಂಕ್ ಹಾಗೂ ಯುನೈಟೆಡ್ ಬ್ಯಾಂಕ್ ಆಫ್ ಆಫ್ರಿಕಾದ ಖಾತೆಗಳ ನಡುವಿನ ವ್ಯವಹಾರದ ಬಗ್ಗೆ ತನಿಖೆ ನಡೆಸುವ ಅಗತ್ಯತೆ ಇದೆ ಎಂದು ಅವರು ಹೇಳಿದ್ದಾರೆ. ಕುಂದ್ರಾ ಅವರನ್ನು ಜುಲೈ 19ರಂದು ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದು, ಅವರ ವಿರುದ್ಧ ಭಾರತೀಯ ದಂಡ ಸಂಹಿತೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News