ಜಮ್ಮು ಕಾಶ್ಮೀರ: ಡ್ರೋನ್ ಅನ್ನು ಗುಂಡು ಹೊಡೆದು ಪತನಗೊಳಿಸಿದ ಪೊಲೀಸರು

Update: 2021-07-23 18:11 GMT

ಜಮ್ಮು, ಜು. 23: ಸುಮಾರು 5 ಕಿ.ಗ್ರಾಂ. ಐಇಡಿ ಸಾಗಿಸುತ್ತಿದ್ದ ಡ್ರೋನ್ ಒಂದನ್ನು ಅಕ್ನೂರ್ ನ ಗುರಾಹ್ ಪಟ್ಟಾನ್ ಪ್ರದೇಶ ಸಮೀಪದ ಗಡಿ ನಿಯಂತ್ರಣ ರೇಖೆಯಲ್ಲಿ ಶುಕ್ರವಾರ ಬೆಳಗ್ಗೆ ಕಾಶ್ಮೀರ ಪೊಲೀಸರು ಗುಂಡು ಹಾರಿಸಿ ಪತನಗೊಳಿಸಿದ್ದಾರೆ. ಡ್ರೋನ್ ಜಮ್ಮುವಿನ ವಾಯು ನೆಲೆ ಮೇಲೆ ಸ್ಫೋಟಕಗಳನ್ನು ಹಾಕಿದ ವಾರಗಳ ಬಳಿಕ ಈ ಘಟನೆ ನಡೆದಿದೆ. 

ಗಡಿಯಲ್ಲಿ ಪಾಕಿಸ್ತಾನದ ಭಾಗದಿಂದ ಹಾರಿ ಬಂದ ಈ ಡ್ರೋನ್ ಅನ್ನು ಪೊಲೀಸರು ಶುಕ್ರವಾರ ಗುಂಡು ಹಾರಿಸಿ ಪತನಗೊಳಿದರು. ಡ್ರೋನ್ನಲ್ಲಿ ಇದ್ದ ಐಇಡಿಯನ್ನು ಪ್ಲಾಸ್ಟಿಕ್ ಪ್ಯಾಕೆಟ್ನಲ್ಲಿ ಇರಿಸಲಾಗಿತ್ತು. ಈ ಐಇಡಿಯನ್ನು ಪೊಲೀಸರು ಅನಂತರ ಸ್ಫೋಟಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಘಟನೆಯನ್ನು ಹೆಚ್ಚುವರಿ ಪೊಲೀಸ್ ಪ್ರಧಾನ ನಿರ್ದೇಶಕ ಮುಖೇಶ್ ಸಿಂಗ್ ದೃಢಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News