ವೈಯಕ್ತಿಕ ಮಾಹಿತಿ ಸಂರಕ್ಷಣಾ ಮಸೂದೆ: ಜಂಟಿ ಸಂಸದೀಯ ಸಮಿತಿಯ ಅವಧಿ ವಿಸ್ತರಣೆ

Update: 2021-07-23 18:28 GMT

ಹೊಸದಿಲ್ಲಿ, ಜು.23: ವೈಯಕ್ತಿಕ ಮಾಹಿತಿ ಸಂರಕ್ಷಣಾ ಮಸೂದೆಯ ಪರಿಶೀಲನೆ ನಡೆಸಲು ನೇಮಕವಾಗಿರುವ ಜಂಟಿ ಸಂಸದೀಯ ಸಮಿತಿ(ಜೆಸಿಪಿ)ಯ ವರದಿ ಸಲ್ಲಿಸುವ ಅವಧಿಯನ್ನು ಈಗ ನಡೆಯುತ್ತಿರುವ ಮುಂಗಾರು ಅಧಿವೇಶನದ ಅಂತ್ಯದವರೆಗೆ ವಿಸ್ತರಿಸಲಾಗಿದೆ ಎಂದು ಮೂಲಗಳು ಹೇಳಿವೆ. 

ವಿಸ್ತರಣೆ ಕೋರಿದ ನಿರ್ಣಯವನ್ನು ಸಮಿತಿ ಸದಸ್ಯ, ಬಿಜೆಪಿ ಸಂಸದ ಪಿಪಿ ಚೌಧರಿ ಮಂಡಿಸಿದ್ದರು. ನಿರ್ಣಯವನ್ನು ಧ್ವನಿಮತದಿಂದ ಅಂಗೀಕರಿಸಲಾಗಿದೆ. ಇದರೊಂದಿಗೆ ವರದಿ ಸಲ್ಲಿಕೆ ಅವಧಿಯನ್ನು 5ನೇ ಬಾರಿ ವಿಸ್ತರಿಸಿದಂತಾಗಿದೆ. 30 ಸದಸ್ಯರ ಜಂಟಿ ಸಂಸದೀಯ ಸಮಿತಿಯನ್ನು ಲೋಕಸಭೆಯಲ್ಲಿ 2019ರ ಡಿಸೆಂಬರ್ನಲ್ಲಿ ರಚಿಸಲಾಗಿದ್ದು ಬಜೆಟ್ ಅಧಿವೇಶನದಲ್ಲಿ ವರದಿ ಸಲ್ಲಿಸಬೇಕಿತ್ತು. ವೈಯಕ್ತಿಕ ಡೇಟಾಗಳ ಬಳಕೆಯನ್ನು ಸರಕಾರ ಹಾಗೂ ಖಾಸಗಿ ಸಂಸ್ಥೆಗಳು ನಿಯಂತ್ರಿಸುವ ಉದ್ದೇಶದ ಮಸೂದೆ ಇದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News