ಚೆನ್ನೈ ಮೃಗಾಲಯದ ಎಲ್ಲ 13 ಸಿಂಹಗಳು ಕೋವಿಡ್ ನೆಗೆಟಿವ್

Update: 2021-07-24 16:50 GMT

ಚೆನ್ನೈ, ಜು.24: ಇಲ್ಲಿಯ ಅರಿಂಗರ್ ಅಣ್ಣಾ ಮೃಗಾಲಯದಲ್ಲಿ ಕೆಲವು ದಿನಗಳ ಹಿಂದೆ ಕೊರೋನವೈರಸ್ ಸೋಂಕಿಗೆ ತುತ್ತಾಗಿದ್ದ ಎಲ್ಲ 13 ಸಿಂಹಗಳು ಚೇತರಿಸಿಕೊಳ್ಳುತ್ತಿದ್ದು,‌ ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿಗಳು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯಕ್ಕೆ ಈ ಸಿಂಹಗಳಲ್ಲಿ ಕೋವಿಡ್ ನಂತರದ ಯಾವುದೇ ಲಕ್ಷಣಗಳಾಗಲೀ ತೊಂದರೆಗಳಾಗಲೀ ಕಾಣಿಸಿಕೊಂಡಿಲ್ಲ ಎಂದರು.

ಕಳೆದ ಜೂನ್ ನಲ್ಲಿ ಸೋಂಕಿನಿಂದಾಗಿ ಸಿಂಹವೊಂದು ಮೃತಪಟ್ಟ ಬಳಿಕ ಮೃಗಾಲಯವು ಈ ಏಷ್ಯಾ ಸಿಂಹಗಳು ಮತ್ತು ಇತರ ಪ್ರಾಣಿಗಳನ್ನು ಕೊರೋನವೈರಸ್ ನಿಂದ ರಕ್ಷಿಸಲು ತೀವ್ರ ಪ್ರಯತ್ನಗಳನ್ನು ನಡೆಸುತ್ತಿದೆ.

ಸಿಂಹಗಳ ಸ್ವಾಬ್ ಸ್ಯಾಂಪಲ್ ಗಳನ್ನು ಪರೀಕ್ಷೆಗಾಗಿ ಭೋಪಾಲದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸಿಸ್ ಗೆ ಕಳುಹಿಸಲಾಗಿತ್ತು. ಪರೀಕ್ಷಾ ವರದಿಗಳಂತೆ ಎಲ್ಲ 13 ಸಿಂಹಗಳು ಸೋಂಕುಮುಕ್ತವಾಗಿವೆ ಎಂದು ಮೃಗಾಲಯದ ಉಪ ನಿರ್ದೇಶಕ ನಾಗ ಸತೀಶ ತಿಳಿಸಿದರು.

ಆದರೂ ಸೋಂಕಿನ ಹಬ್ಬುವಿಕೆಯನ್ನು ಗಮನದಲ್ಲಿಟ್ಟುಕೊಂಡು ಪಶುವೈದ್ಯರು ಮತ್ತು ಕ್ಷೇತ್ರ ಸಿಬ್ಬಂದಿಗಳ ತಂಡವು ದಿನದ 24 ಗಂಟೆಯೂ ಸಿಂಹಗಳ ಆರೋಗ್ಯ ಸ್ಥಿತಿಯ ಮೇಲೆ ನಿಕಟ ನಿಗಾಯಿರಿಸಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News