ಶುಕ್ರವಾರ 39,097 ಹೊಸ ಸೋಂಕು ಪ್ರಕರಣ ದಾಖಲು: ಆರೋಗ್ಯ ಇಲಾಖೆ ಮಾಹಿತಿ

Update: 2021-07-24 18:02 GMT

ಹೊಸದಿಲ್ಲಿ, ಜು.24: ಶುಕ್ರವಾರ ಭಾರತದಲ್ಲಿ ಕೋವಿಡ್ ಸೋಂಕಿನ 39,097 ಹೊಸ ಪ್ರಕರಣ ದಾಖಲಾಗಿದ್ದು ಒಟ್ಟು ಪ್ರಕರಣಗಳ ಸಂಖ್ಯೆ 3,13,32,159ಕ್ಕೇರಿದೆ. ಶುಕ್ರವಾರ 546 ಸಾವು ಸಂಭವಿಸಿದ್ದು ಸೋಂಕಿನಿಂದ ಮೃತರ ಸಂಖ್ಯೆ 4,20,016ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಕೇರಳದಲ್ಲಿ ಅತ್ಯಧಿಕ(17,518) ಪ್ರಕರಣ ದಾಖಲಾಗಿದ್ದರೆ ಮಹಾರಾಷ್ಟ್ರದಲ್ಲಿ 6,753 ಪ್ರಕರಣ ಪತ್ತೆಯಾಗಿದೆ. 4,08,977 ಸಕ್ರಿಯ ಪ್ರಕರಣಗಳಿದ್ದು ಇದು ಒಟ್ಟು ಪ್ರಕರಣಗಳ 1.31% ಆಗಿದೆ. ಇದರಲ್ಲಿ 1.35 ಸಕ್ರಿಯ ಪ್ರಕರಣ ಕೇರಳದಲ್ಲಿದೆ. ಇದುವರೆಗೆ ಸುಮಾರು 3,05,03,166 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಚೇತರಿಕೆಯ ಪ್ರಮಾಣ 97.35%ಕ್ಕೆ ತಲುಪಿದೆ ಮತ್ತು ವಾರದ ಪಾಸಿಟಿವಿಟಿ ಪ್ರಮಾಣ 2.2%ವಿದೆ.

ದೈನಂದಿನ ಪಾಸಿಟಿವಿಟಿ ಪ್ರಮಾಣ ಸತತ 33ನೇ ದಿನವೂ 5%ಕ್ಕಿಂತ ಕೆಳಗಿದ್ದು 2.40% ಆಗಿದೆ. ಇದುವರೆಗೆ 45.45 ಕೋಟಿ ಸೋಂಕು ಪರೀಕ್ಷೆ ಮಾಡಲಾಗಿದೆ ಎಂದು ಇಲಾಖೆ ಹೇಳಿದೆ. ದೇಶದಲ್ಲಿ ಒಟ್ಟು 42,78,82,261 ಡೋಸ್ ಲಸಿಕೆ ನೀಡಲಾಗಿದೆ. ರಾಜ್ಯ ಸರಕಾರ, ಕೇಂದ್ರಾಡಳಿತ ಪ್ರದೇಶ, ಖಾಸಗಿ ಆಸ್ಪತ್ರೆಗಳ ಬಳಿ ಇನ್ನೂ 2.98 ಕೋಟಿ ಡೋಸ್ ಗೂ ಅಧಿಕ ಲಸಿಕೆ ಬಳಕೆಯಾಗದೆ ಉಳಿದಿದೆ. ಇದುವರೆಗೆ ಕೇಂದ್ರ ಸರಕಾರ 44.53 ಕೋಟಿ ಡೋಸ್ ಲಸಿಕೆ ಪೂರೈಸಿದ್ದು, 85,58,360 ಡೋಸ್ ಲಸಿಕೆ ಪೂರೈಕೆ ಹಂತದಲ್ಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News