ದೇಶದಲ್ಲಿ 39,742 ಹೊಸ ಕೋವಿಡ್ ಪ್ರಕರಣಗಳು, 535 ಸಾವುಗಳು ವರದಿ

Update: 2021-07-25 14:42 GMT

ಹೊಸದಿಲ್ಲಿ, ಜು.25: ರವಿವಾರ ಬೆಳಿಗ್ಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 39,742 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು,ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 4.2 ಲಕ್ಷಕ್ಕೆ ಏರಿಕೆಯಾಗಿದೆ. ಈ ಅವಧಿಯಲ್ಲಿ 535 ಜನರು ಸೋಂಕಿಗೆ ಬಲಿಯಾಗಿದ್ದಾರೆ.

ಕೇರಳದಲ್ಲಿ ಅತಿ ಹೆಚ್ಚಿನ (18,531) ಪ್ರಕರಣಗಳು ವರದಿಯಾಗಿದ್ದು,ದೇಶಾದ್ಯಂತ ವರದಿಯಾಗಿರುವ ಹೊಸ ಪ್ರಕರಣಗಳಲ್ಲಿ ಶೇ.46ಕ್ಕೂ ಅಧಿಕ ಪಾಲನ್ನು ಹೊಂದಿದೆ. ಸಕ್ರಿಯ ಪ್ರಕರಣಗಳು ಕೊಂಚ ಇಳಿಕೆಯಾಗಿದ್ದು,ಸದ್ಯ ದೇಶದಲ್ಲಿ 4.08 ಲಕ್ಷ ಸಕ್ರಿಯ ಪ್ರಕರಣಗಳಿವೆ.

ತನ್ಮಧ್ಯೆ ದೇಶದಲ್ಲಿ ನಿತ್ಯದ ಪ್ರಕರಣಗಳ ಸಂಖ್ಯೆ 50,000 ಮೀರದಂತೆ ಎಚ್ಚರಿಕೆ ವಹಿಸುವಂತೆ ಕೋವಿಡ್ ತುರ್ತು ಕಾರ್ಯತಂತ್ರವನ್ನು ರೂಪಿಸುವ ಹೊಣೆ ಹೊತ್ತಿರುವ ಅಧಿಕಾರಯುತ ಸಮಿತಿಯು ಸರಕಾರಕ್ಕೆ ಸೂಚಿಸಿದೆ. ಮುಂದಿನ ಅಲೆಯ ಅವಧಿಯಲ್ಲಿ ದಿನವೊಂದಕ್ಕೆ ನಾಲ್ಕರಿಂದ ಐದು ಲಕ್ಷ ಹೊಸ ಪ್ರಕರಣಗಳನ್ನು ನಿಭಾಯಿಸಲು ಪೂರ್ವಸಿದ್ಧತೆ ಮಾಡಿಕೊಳ್ಳುವಂತೆಯೂ ಸಮಿತಿಯು ಸರಕಾರಕ್ಕೆ ತಿಳಿಸಿದೆ.

ಮಾಸ್ಕ್ ಧರಿಸುವಿಕೆ, ಸುರಕ್ಷಿತ ಅಂತರ ಇತ್ಯಾದಿ ಕೋವಿಡ್ ಶಿಷ್ಟಾಚಾರಗಳು ಮತ್ತು ಎಚ್ಚರಿಕೆಯಿಂದ ಯೋಜಿತ ಲಾಕ್ಡೌನ್ಗಳ ಮೂಲಕ ದೈನಂದಿನ ಹೊಸ ಪ್ರಕರಣಗಳ ಸಂಖ್ಯೆಯನ್ನು 50,000ದೊಳಗೆ ಸೀಮಿತಗೊಳಿಸಲು ಸಾಧ್ಯವಿದೆ ಎಂದೂ ಸಮಿತಿಯು ಸರಕಾರದ ಗಮನಕ್ಕೆ ತಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News