ಅಸ್ಸಾಂ:‌ ಮೂವರು ಮಹಿಳೆಯರು, ಮಕ್ಕಳು ಸೇರಿದಂತೆ 9 ಮಂದಿ ರೊಹಿಂಗ್ಯಾ ನಿರಾಶ್ರಿತರ ಬಂಧನ

Update: 2021-07-25 18:01 GMT

ಗುವಾಹಟಿ, ಜು. 25: ಮೂವರು ಮಹಿಳೆಯರು ಹಾಗೂ ಮೂವರು ಮಕ್ಕಳು ಸೇರಿದಂತೆ 9 ಮಂದಿ ರೊಹಿಂಗ್ಯಾ ನಿರಾಶ್ರಿತರನ್ನು ಅಸ್ಸಾಂನ ಗುವಾಹತಿಯ ರೈಲು ನಿಲ್ದಾಣದಿಂದ ರವಿವಾರ ಬೆಳಗ್ಗೆ ಬಂಧಿಸಲಾಗಿದೆ. ಅವರು ನಕಲಿ ಯುಎನ್ಎಚ್ ಸಿಆರ್ (ಯುನೈಟಡ್ ನ್ಯಾಶನ್ಸ್ ಹೈ ಕಮಿಷನರ್ ಫಾರ್ ರೆಫ್ಯೂಜೀಸ್) ಗುರುತು ಪತ್ರ ತೋರಿಸಿ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ. ಅಗರ್ತಲಾ-ದೇವಗಢ ಎಕ್ಸ್ಪ್ರೆಸ್ ರೈಲಿನಲ್ಲಿ ತಪಾಸಣೆ ನಡೆಸುತ್ತಿದ್ದ ಸಂದರ್ಭ ಮೂವರು ಮಹಿಳೆಯರು, ಮೂವರು ಮಕ್ಕಳನ್ನು ಒಳಗೊಂಡ ರೊಹಿಂಗ್ಯಾ ನಿರಾಶ್ರಿತರ ಗುಂಪು ಪತ್ತೆಯಾಯಿತು ಎಂದು ಸರಕಾರಿ ರೈಲ್ವೆ ಪೊಲೀಸ್ ಸಿಬ್ಬಂದಿ ತಿಳಿಸಿದ್ದಾರೆ.

9 ಮಂದಿಯಲ್ಲಿ ಯಾರೊಬ್ಬರಲ್ಲೂ ಮೌಲ್ಯಯುತ ದಾಖಲೆಗಳು ಇರಲಿಲ್ಲ. ಈ ಪ್ರಕರಣವನ್ನು ಅಕ್ರಮ ಪ್ರವೇಶದ ಪ್ರಕರಣ ಎಂದು ಪರಿಗಣಿಸಿ ಅವರನ್ನು ಬಂಧಿಸಲಾಗಿದೆ ಎಂದು ಸರಕಾರಿ ರೈಲ್ವೆ ಪೊಲೀಸರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News