ಬಂದೂಕು ಪರವಾನಿಗೆ ಹಗರಣ: ಸಿಬಿಐ ಬಲೆಯಲ್ಲಿ ಜಿಲ್ಲಾ ದಂಡಾಧಿಕಾರಿ

Update: 2021-07-25 18:14 GMT

ಶ್ರೀನಗರ, ಜು. 25: ಬಂದೂಕು ಪರವಾನಿಗೆ ಹಗರಣದಲ್ಲಿ ಜಮ್ಮು ಹಾಗೂ ಕಾಶ್ಮೀರದ ಹಲವು ಜಿಲ್ಲೆಗಳಲ್ಲಿ ದಂಡಾಧಿಕಾರಿಯಾಗಿದ್ದ ಐಎಎಸ್ ಅಧಿಕಾರಿಯೊಬ್ಬರು ಭಾಗಿಯಾಗಿದ್ದಾರೆ ಎಂದು ಸಿಬಿಐ ಶನಿವಾರ ತಿಳಿಸಿದೆ. 

ಹಲವು ಜಿಲ್ಲೆಗಳಲ್ಲಿ ದಂಡಾಧಿಕಾರಿಯಾಗಿದ್ದ ಶಾಹಿದ್ ಇಕ್ಬಾಲ್ ಚೌಧರಿ ಅವರು ಹಣಕ್ಕಾಗಿ 2.78 ಲಕ್ಷಕ್ಕೂ ಅಧಿಕ ಅಕ್ರಮ ಬಂದೂಕುಗಳಿಗೆ ಪರವಾನಿಗೆ ನೀಡಿದ್ದಾರೆ. ಇದು ದೇಶದ ಅತಿ ದೊಡ್ಡ ಬಂದೂಕು ಪರವಾನಿಗೆ ಹಗರಣ ಎಂದು ನಂಬಲಾಗಿದೆ ಎಂದು ಅದು ತಿಳಿಸಿದೆ. ಜಮ್ಮು ಹಾಗೂ ಕಾಶ್ಮೀರದ ಬಂದೂಕು ಪರವಾನಿಗೆ ಹಗರಣಕ್ಕೆ ಸಂಬಂಧಿಸಿ 20 ಬಂದೂಕು ಅಂಗಡಿಗಳ ಸಹಿತ 40 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಸಿಬಿಐ ಹೇಳಿಕೆಯಲ್ಲಿ ತಿಳಿಸಿದೆ. 

ದಾಳಿಗೊಳಗಾದವರಲ್ಲಿ ಶಾಹಿದ್ ಇಕ್ಬಾಲ್ ಚೌಧರಿ ಹಾಗೂ ನೀರಜ್ ಕುಮಾರ್ ಐಎಎಸ್ ಅಧಿಕಾರಿಗಳು. ಇವರಲ್ಲಿ ಬುಡಕಟ್ಟು ವ್ಯವಹಾರಗಳ ಕಾರ್ಯದರ್ಶಿಯಾಗಿರುವ ಚೌಧರಿ ಅವರು ಜಮ್ಮು ಹಾಗೂ ಕಾಶ್ಮೀರದ 6 ಜಿಲ್ಲೆಗಳಲ್ಲಿ ದಂಡಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಚೌಧರಿ ಅವರ ನಿವಾಸದಲ್ಲಿ ನಡೆದ ಶೋಧ ಕಾರ್ಯಾಚರಣೆ ಸಂದರ್ಭ ದೋಷಾರೋಪಣೆಯ ಯಾವುದೇ ಸಾಮಗ್ರಿಗಳು ದೊರೆತಿಲ್ಲ. ಆದರೆ, ಕೆಲವು ಪ್ರಕರಣಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸಿಬಿಐ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News