ಹೆಚ್ಚು ಮಕ್ಕಳಿರುವ ಕುಟುಂಬಕ್ಕೆ ಕೇರಳದ ಚರ್ಚ್ ನಿಂದ ಕೊಡುಗೆ

Update: 2021-07-26 18:59 GMT

ಕೊಟ್ಟಾಯಂ, ಜು. 26: ಐದಕ್ಕಿಂತ ಹೆಚ್ಚು ಮಕ್ಕಳಿರುವ ಕುಟುಂಬಕ್ಕೆ ತಿಂಗಳಿಗೆ ರೂ. 1,500 ಆರ್ಥಿಕ ನೆರವು, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ನಾಲ್ಕನೇ ಮಗುವಿಗಾಗಿ ಗರ್ಭಿಣಿಯಾದವರಿಗೆ ಉಚಿತ ವೈದ್ಯಕೀಯ ನೆರವು. ಇದು ದೊಡ್ಡ ಕುಟುಂಬವನ್ನು ಉತ್ತೇಜಿಸಲು ಪಾಲಾ ಸೈರೊ-ಮಲಬಾರ್ ಇಪಾರ್ಚಿ ಚರ್ಚ್ ನೀಡಿದ ಕೊಡುಗೆ. ಬೇಗ ವಿವಾಹ, ದೊಡ್ಡ ಕುಟುಂಬಕ್ಕೆ ಆಗ್ರಹ ಹಾಗೂ ಗರ್ಭ ನಿರೋಧಕ ಕ್ರಮಗಳನ್ನು ಅನುಸರಿಸದಿರುವಂತೆ ಕರೆ ನೀಡಿದರೂ ಯಾವುದೇ ರೀತಿಯ ಸಕಾರಾತ್ಮಕ ಫಲಿತಾಂಶ ದೊರೆಯದ ಹಿನ್ನೆಲೆಯಲ್ಲಿ ಪೋಪ್ ಫ್ರಾನ್ಸಿಸ್ ಅವರು ಕರೆ ನೀಡಿದ ‘ಕುಟುಂಬದ ವರ್ಷ’ ಆಚರಣೆಯ ಭಾಗವಾಗಿ ಹೆಚ್ಚು ಮಕ್ಕಳನ್ನು ಹೊಂದುವಂತೆ ಸಮುದಾಯದ ಸದಸ್ಯರನ್ನು ಉತ್ತೇಜಿಸಲು ಸೈರೊ-ಮಲಬಾರ್ ಚರ್ಚ್ ಈಗ ಸಾಮಾಜಿಕ ಮಾಧ್ಯಮದಲ್ಲಿ ಅಭಿಯಾನ ಆರಂಭಿಸಿದೆ.

ಇಪಾರ್ಚಿ ಪಾಲ ಹಾಗೂ ಪಾಲದಲ್ಲಿರುವ ಫ್ಯಾಮಿಲಿ ಅಪೊಸ್ಟೋಲೇಟ್, ಮಾರ್ ಸ್ಲೀವಾ ಮೆಡಿಸಿಟಿಯಂತಹ ಸಂಸ್ಥೆಗಳು, ಪಾಲಾದ ಸೈಂಟ್ ಜೋಸೆಫ್ಸ್ ಕಾಲೇಜ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಜಂಟಿಯಾಗಿ ಈ ಉಪಕ್ರಮ ಆರಂಭಿಸಿದೆ. ಈ ನಡುವೆ ಫ್ಯಾಮಿಲಿ ಅಪೊಸ್ಟೊಲೇಟ್ನ ನಿರ್ದೇಶಕರಾಗಿರುವ ಫಾದರ್ ಜೋಸೆಪ್ ಕುಟ್ಟಿಯಾಂಕಲ್, ಈ ನಿರ್ಧಾರವನ್ನು ಜನನ ಹಾಗೂ ಫಲವಂತಿಕೆಯ ದರದ ಕುರಿತು ನಡೆಸಲಾದ ಯಾವುದೇ ಸಮೀಕ್ಷೆಯ ಆಧಾರದಲ್ಲಿ ತೆಗೆದುಕೊಂಡಿರುವುದು ಅಲ್ಲ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News