ಆನ್‌ಲೈನ್, ಆಫ್‌ಲೈನ್‌ನಲ್ಲಿ ಕಿರುಚಿತ್ರ ಸ್ಪರ್ಧೆ

Update: 2021-07-27 13:11 GMT

ಮಂಗಳೂರು, ಜು.27: ಪ್ರಧಾನಮಂತ್ರಿ ಆವಾಸ್ ಯೋಜನೆಯು ಆರು ವರ್ಷಗಳನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ‘ಕುಶಿಯೋನ್ ಕಾ ಆಶಿಯನಾ’ ವಿಷಯಾಧಾರಿತ ಕಿರುಚಿತ್ರ ಸ್ಪರ್ಧೆಗಾಗಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ಫಲಾನುಭವಿಗಳ ಜೀವನದಲ್ಲಿ ತಂದ ಬದಲಾವಣೆಗಳು ಎಂಬ ವಿಷಯದಲ್ಲಿ ಕಿರುಚಿತ್ರ ಸ್ಪರ್ಧೆಯಲ್ಲಿ ಫಲಾನುಭವಿಗಳು, ವಿದ್ಯಾರ್ಥಿಗಳು, ಯುವಕರು, ಸಂಘ ಸಂಸ್ಥೆಗಳು ಭಾಗವಹಿಸಬಹುದು.

ಅಂತರ್ಜಾಲ ತಾಣ https://pmay-urban.gov.in ನಲ್ಲಿ ನೋಂದಾಯಿಸಿಕೊಂಡು ಗೂಗಲ್ ಪ್ಲೇಸ್ಟೋರ್‌ನಲ್ಲಿ ಲಭ್ಯವಿರುವ PMAY(U)  ಆಪ್ಲಿಕೇಶನ್‌ನಲ್ಲಿ ಚಿತ್ರೀಕರಿಸಿದ ಕಿರುಚಿತ್ರವನ್ನು ಸೆಪ್ಟೆಂಬರ್ 10 ರೊಳಗೆ ಅಪ್‌ಲೋಡ್ ಮಾಡಬಹುದು.

ಕೇಂದ್ರ ಸರಕಾರವು ಸ್ಪರ್ಧೆಯ ಫಲಿತಾಂಶವನ್ನು ಸೆ.30ರಂದು ಘೋಷಿಸಲಿದೆ. ವಿಜೇತರಿಗೆ ಪ್ರಥಮ ಬಹುಮಾನ 25,000 ರೂ., ದ್ವಿತೀಯ ಬಹುಮಾನ 20,000 ರೂ.ಗಳು, ತೃತೀಯ ಬಹುಮಾನ 12,500 ರೂ. ನಗದು ಬಹುಮಾನ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗೆ ಜಿಲ್ಲಾ ನಗರಾಭಿವೃದ್ಧಿ ಕೋಶ ಕಚೇರಿಯ ಸಿ.ಎಲ್.ಟಿ.ಸಿ ತಜ್ಞರು ಅಥವಾ ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಪರ್ಕಿಸುವಂತೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News