ಉಡುಪಿ: ಮಂಗಳವಾರ 98 ಮಂದಿಗೆ ಕೊರೋನ ಸೋಂಕು ದೃಢ; ಮಹಿಳೆ ಬಲಿ

Update: 2021-07-27 15:26 GMT
ಸಾಂದರ್ಭಿಕ ಚಿತ್ರ

ಉಡುಪಿ, ಜು.27: ಜಿಲ್ಲೆಯಲ್ಲಿ ಮಂಗಳವಾರ ಒಟ್ಟು 98 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ದಿನದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದು, 107 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 872 ಮಂದಿ ಈಗಲೂ ಸೋಂಕಿಗೆ ಸಕ್ರಿಯರಾಗಿದ್ದು ಚಿಕಿತ್ಸೆಯಲ್ಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.

ಮಂಗಳವಾರ ಕುಂದಾಪುರ ತಾಲೂಕಿನ 78 ವರ್ಷ ಪ್ರಾಯದ ಹಿರಿಯ ಮಹಿಳೆಯೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್‌ಗೆ ಮೃತಪಟ್ಟವರ ಸಂಖ್ಯೆ 411ಕ್ಕೇರಿದೆ. ಹೃದಯ ಸಮಸ್ಯೆ, ಅಧಿಕ ರಕ್ತದೊತ್ತಡದಿಂದ ಬಳಲುತಿದ್ದ ಅವರು ನ್ಯುಮೋನಿಯಾ ಹಾಗೂ ಗಂಭೀರ ಕೋವಿಡ್ ಲಕ್ಷಣದೊಂದಿಗೆ ಹಠಾತ್ತನೆ ಕಾಣಿಸಿಕೊಂಡ ಉಸಿರಾಟದ ತೊಂದರೆಯಿಂದ ಸೋಮವಾರ ಮೃತಪಟ್ಟರು.

ಇಂದು ಕೊರೋನ ಪಾಸಿಟಿವ್ ದೃಢಪಟ್ಟ 98 ಮಂದಿಯಲ್ಲಿ 51 ಮಂದಿ ಪುರುಷರಾಗಿದ್ದರೆ, ಉಳಿದ 47 ಮಂದಿ ಮಹಿಳೆಯರು. ಇವರಲ್ಲಿ 47 ಮಂದಿ ಉಡುಪಿ ತಾಲೂಕು, 28 ಮಂದಿ ಕುಂದಾಪುರ ಹಾಗೂ 23 ಮಂದಿ ಕಾರ್ಕಳ ತಾಲೂಕಿನವರು. 98 ಮಂದಿಯಲ್ಲಿ 12 ಮಂದಿಗೆ ಕೋವಿಡ್ ಆಸ್ಪತ್ರೆ ಹಾಗೂ 86 ಮಂದಿಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.

ಇಂದು ಕೊರೋನ ಪಾಸಿಟಿವ್ ದೃಢಪಟ್ಟ 98 ಮಂದಿಯಲ್ಲಿ 51 ಮಂದಿ ಪುರುಷರಾಗಿದ್ದರೆ, ಉಳಿದ 47 ಮಂದಿ ಮಹಿಳೆಯರು. ಇವರಲ್ಲಿ 47 ಮಂದಿ ಉಡುಪಿ ತಾಲೂಕು, 28 ಮಂದಿ ಕುಂದಾಪುರ ಹಾಗೂ 23 ಮಂದಿ ಕಾರ್ಕಳ ತಾಲೂಕಿನವರು. 98 ಮಂದಿಯಲ್ಲಿ 12 ಮಂದಿಗೆ ಕೋವಿಡ್ ಆಸ್ಪತ್ರೆ ಹಾಗೂ 86 ಮಂದಿಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಸೋಮವಾರ 107 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 67,906ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 2515 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 69,189ಕ್ಕೇರಿದೆ ಎಂದು ಡಾ.ಉಡುಪ ತಿಳಿಸಿದರು. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 7,67,191 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ.

4,045 ಮಂದಿಗೆ ಕೋವಿಡ್ ಲಸಿಕೆ
ಜಿಲ್ಲೆಯಲ್ಲಿ ಮಂಗಳವಾರ 4,045 ಮಂದಿ ಕೋವಿಡ್ ಲಸಿಕೆ ಪಡೆದಿದ್ದಾರೆ. ಇವರಲ್ಲಿ 2,568 ಮಂದಿ ಲಸಿಕೆಯ ಮೊದಲ ಡೋಸ್ ಸ್ವೀಕರಿಸಿದರೆ, 1,477 ಮಂದಿ ಎರಡನೇ ಡೋಸ್ ಪಡೆದಿದ್ದಾರೆ ಎಂದು ಡಿಎಚ್‌ಓ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.

ಇಂದು 18ರಿಂದ 44 ವರ್ಷದೊಳಗಿನ 1,352 ಮಂದಿ ಮೊದಲ ಡೋಸ್ ಹಾಗೂ 307 ಮಂದಿ ಎರಡನೇ ಡೋಸನ್ನು ಪಡೆದಿದ್ದಾರೆ. 45 ವರ್ಷ ಮೇಲಿನ 1,214 ಮಂದಿ ಮೊದಲ ಡೋಸ್ ಹಾಗೂ 1152 ಮಂದಿ ಎರಡನೇ ಡೋಸ್‌ನ್ನು ಪಡೆದಿದ್ದಾರೆ. ಇಬ್ಬರು ಆರೋಗ್ಯ ಕಾರ್ಯಕರ್ತರು ಹಾಗೂ 18 ಮಂದಿ ಮುಂಚೂಣಿ ಕಾರ್ಯಕರ್ತರಿಗೂ ಇಂದು ಲಸಿಕೆ ನೀಡಲಾಗಿದೆ.

ಇಂದು 18ರಿಂದ 44 ವರ್ಷದೊಳಗಿನ 1,352 ಮಂದಿ ಮೊದಲ ಡೋಸ್ ಹಾಗೂ 307 ಮಂದಿ ಎರಡನೇ ಡೋಸನ್ನು ಪಡೆದಿದ್ದಾರೆ. 45 ವರ್ಷ ಮೇಲಿನ 1,214 ಮಂದಿ ಮೊದಲ ಡೋಸ್ ಹಾಗೂ 1152 ಮಂದಿ ಎರಡನೇ ಡೋಸ್‌ನ್ನು ಪಡೆದಿದ್ದಾರೆ. ಇಬ್ಬರು ಆರೋಗ್ಯ ಕಾರ್ಯಕರ್ತರು ಹಾಗೂ 18 ಮಂದಿ ಮುಂಚೂಣಿ ಕಾರ್ಯಕರ್ತರಿಗೂ ಇಂದು ಲಸಿಕೆ ನೀಡಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 5,00,745 ಮಂದಿ ಲಸಿಕೆಯ ಮೊದಲ ಡೋಸ್ ಪಡೆದರೆ, 1,77,562 ಮಂದಿ ಎರಡನೇ ಡೋಸ್‌ನ್ನು ಪಡೆದುಕೊಂಡಿದ್ದಾರೆ ಎಂದು ಡಾ.ಉಡುಪ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News