ಮಾಜಿ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ದಿಲ್ಲಿ ಪೊಲೀಸ್ ಮುಖ್ಯಸ್ಥರಾಗಿ ನೇಮಕ

Update: 2021-07-27 17:25 GMT
photo: Ndtv

ಹೊಸದಿಲ್ಲಿ: ಕೇಂದ್ರ ತನಿಖಾ ದಳದ ವಿವಾದಾತ್ಮಕ ಮಾಜಿ ಅಧಿಕಾರಿ ರಾಕೇಶ್ ಅಸ್ತಾನ ಅವರನ್ನು ದಿಲ್ಲಿ ಪೊಲೀಸ್ ಆಯುಕ್ತರನ್ನಾಗಿ ನೇಮಿಸಲಾಗಿದೆ. ಅಸ್ತಾನ ಅವರನ್ನು 2018 ರಲ್ಲಿ ಸಿಬಿಐನಿಂದ ತೆಗೆದುಹಾಕಲಾಯಿತು ಹಾಗೂ  ನಂತರ ಅವರನ್ನು ಗಡಿ ಭದ್ರತಾ ಪಡೆಯ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು..

ಅಸ್ತಾನ  ಹೊರಗಿನವರಾಗಿ ಕಾಣಿಸಿಕೊಂಡಿರುವುದರಿಂದ ಈ ನೇಮಕವು ದಿಲ್ಲಿ ಪೊಲೀಸರಲ್ಲಿ ಅಶಾಂತಿಗೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ. ಎಸ್.ಎನ್. ಶ್ರೀವಾಸ್ತವ ಅವರು ನಿವೃತ್ತರಾದಾಗ ಕೇವಲ ಒಂದು ತಿಂಗಳ ಹಿಂದೆ ಬಾಲಾಜಿ ಶ್ರೀವಾಸ್ತವ ಅವರಿಗೆ ಆಯುಕ್ತರಾಗಿ ಹೆಚ್ಚುವರಿ ಹೊಣೆ ನೀಡಲಾಗಿದೆ ಎಂದು ಕೆಲವು ಅಧಿಕಾರಿಗಳು ಹೇಲಿದ್ದಾರೆ.

1984 ರ ಬ್ಯಾಚಿನ ಗುಜರಾತ್ ಕೇಡರ್ ನ  ಐಪಿಎಸ್ ಅಧಿಕಾರಿ, ಅಸ್ತಾನ ಅವರನ್ನು ಎನ್ ಡಿಎ ಅಧಿಕಾರಕ್ಕೆ ಬಂದ ನಂತರ ಸಿಬಿಐಗೆ ವರ್ಗಾಯಿಸಲಾಯಿತು, ಇದು ಶ್ರೇಯಾಂಕಗಳಲ್ಲಿ ಅಸಮಾಧಾನವನ್ನು ಉಂಟುಮಾಡಿತ್ತು.

ಅಸ್ತಾನ ಅವರು  ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಆಪ್ತರೆಂದು ಪರಿಗಣಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News