ಪೆಗಾಸಸ್ ಬೇಹುಗಾರಿಕೆ: ಬಿಹಾರ ಕ್ರಿಕೆಟ್ ನಲ್ಲಿ ಸ್ಪೈವೇರ್ ನ ಕರಿ ನೆರಳು

Update: 2021-07-27 18:01 GMT

ಹೊಸದಿಲ್ಲಿ, ಜು. 27: ಪೆಗಾಸಸ್ ಪ್ರೊಜೆಕ್ಟ್ ವಿಶ್ಲೇಷಿಸಿದ ಸೋರಿಕೆಯಾದ ಡಾಟಾಬೇಸ್ನಲ್ಲಿ ಭಾರತ ಕ್ರಿಕೆಟ್ ಆಡಳಿತ ಮಂಡಳಿಯ ಉನ್ನತ ಸ್ಥಾನದಲ್ಲಿರುವವರೊಂದಿಗೆ ಆಪ್ತರೆಂದು ಪರಿಗಣಿಸಲಾಗಿದ್ದ ಬಿಹಾರ್ ಕ್ರಿಕೆಟ್ ಅಸೋಸಿಯೇಶನ್ ಪ್ರಸಕ್ತ ವರಿಷ್ಠ ರಾಕೇಶ್ ತಿವಾರಿ ಅವರು ಬಳಸುತ್ತಿರುವ ಎರಡು ದೂರವಾಣಿ ಸಂಖ್ಯೆಯನ್ನು ಗುರುತಿಸಲಾಗಿದೆ ಎಂದು ‘The Wire’ ವರದಿ ಮಾಡಿದೆ. 

ಸೋರಿಕೆಯಾದ ದಾಖಲೆಗಳ ಪ್ರಕಾರ ರಾಕೇಶ್ ತಿವಾರಿ ಅವರು ಬಿಹಾರ್ ಕ್ರಿಕೆಟ್ ಅಸೋಸಿಯೇಶನ್ ನ ಅಧ್ಯಕ್ಷರಾಗುವುದಕ್ಕಿಂತ ಒಂದು ವರ್ಷ ಮೊದಲು ಎನ್ಎಸ್ಒ ಸಮೂಹದ ಅಪರಿಚಿತ ಗ್ರಾಹಕರಿಂದ 2018ರಲ್ಲಿ ಕಣ್ಗಾವಲಿಗೆ ಸಂಭಾವ್ಯ ಅಭ್ಯರ್ಥಿಯನ್ನಾಗಿ ರಾಕೇಶ್ ತಿವಾರಿ ಅವರು ಬಳಸುತ್ತಿದ್ದ ಎರಡು ದೂರವಾಣಿ ಸಂಖ್ಯೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು ಎಂದು ಅದು ಹೇಳಿದೆ. ಸೋರಿಕೆಯಾದ ಡಾಟಾದ ಭಾಗವಾಗಿರುವ ಎರಡೂ ದೂರವಾಣಿ ಸಂಖ್ಯೆಗಳ ಬಗ್ಗೆ ‘The Wire’  ರಾಕೇಶ್ ತಿವಾರಿ ಅವರನ್ನು ಪ್ರಶ್ನಿಸಿದೆ. 

ಆದರೆ, ಅವರು, ದಾಖಲೆಗಳ ಪಟ್ಟಿ ನಿಜ ಎಂದು ನಂಬಲು ಸಾಧ್ಯವಿಲ್ಲ ಎಂದಿದ್ದಾರೆ. ‘‘ಇದು (ಈ ಪಟ್ಟಿ) ನಿಮ್ಮಂತಹ ದೇಶ ವಿರೋಧಿ ವ್ಯಕ್ತಿಗಳ ಕಲ್ಪನೆ. ನಾನು ರಾಷ್ಟ್ರೀಯವಾದಿ ಹಾಗೂ ಸಂಘದ ಪ್ರಾಮಾಣಿಕ ಕಾರ್ಯಕರ್ತ’’ ಎಂದು ತಿವಾರಿ ಹೇಳಿದ್ದಾರೆ. ಅಲ್ಲದೆ, ತನ್ನ ಫೋನ್ ಅನ್ನು ವಿಧಿ ವಿಜ್ಞಾನ ವಿಶ್ಲೇಷಣೆಗೆ ಒಳಪಡಿಸುವ ಸಾಧ್ಯತೆ ಬಗ್ಗೆ ನಿರಾಕರಿಸಿದ್ದಾರೆ. 

ಭಾರತದ ಕ್ರಿಕೆಟ್ ಆಡಳಿತ ಮಂಡಳಿಯ ಅಳವಾದ ತಿಳುವಳಿಕೆ ಇರುವ ಮೂಲದ ಪ್ರಕಾರ, ರಾಕೇಶ್ ತಿವಾರಿ ಅವರು ಬಿಜೆಪಿಗೆ ಆಪ್ತ. ಅಲ್ಲದೆ, ಅವರು ದೇಶದಲ್ಲಿ ಕ್ರೀಡೆಗಳನ್ನು ನಡೆಸುವ ಖಾಸಗಿ ಸಂಸ್ಥೆ ಬೋರ್ಡ್ ಆಫ್ ಕ್ರಿಕೆಟ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ)ದ ಪ್ರಮುಖ ನಾಯಕರೊಂದಿಗೆ ಆಗಾಗ ಮಾತುಕತೆ ನಡೆಸುತ್ತಿದ್ದರು. ಬಿಸಿಸಿಐಯ ಅಧ್ಯಕ್ಷ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ, ಕೇಂದ್ರ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ಕಾರ್ಯದರ್ಶಿ. ಅರುಣ್ ಸಿಂಗ್ ಧುಮಾಲ್ ಕೋಶಾಧಿಕಾರಿಯಾಗಿದ್ದಾರೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News