ಗ್ರಾಹಕರ ಆಯೋಗ: ಅವಧಿ ಮೀರಿದ ಕಡತ ನಾಶ

Update: 2021-07-28 16:27 GMT

ಉಡುಪಿ, ಜು.28: ರಾಜ್ಯ ಗ್ರಾಹಕರ ಆಯೋಗದ ಆದೇಶದಂತೆ 2009 ರಿಂದ 2015ನೇ ಸಾಲಿನವರೆಗಿನ ಕಡತಗಳಲ್ಲಿ ಅಂತಿಮ ಆದೇಶದ ವಿರುದ್ಧ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ರಾಜ್ಯ ಉಚ್ಛ ನ್ಯಾಯಾಲಯ ಹಾಗೂ ಭಾರತ ಸರ್ವೋಚ್ಛ ನ್ಯಾಯಾಲಯಗಳಲ್ಲಿ ಯಾವುದಾದರೂ ಮೇಲ್ಮನವಿ ಅಥವಾ ರಿಟ್‌ ಅರ್ಜಿ, ಪುನರ್ ಪರಿಶೀಲನಾ ಅರ್ಜಿಗಳು ದಾಖ ಲಾಗಿದ್ದರೆ ಅಥವಾ ತಡೆಯಾಜ್ಞೆ ಇದ್ದರೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಗಮನಕ್ಕೆ ತರಬಹುದಾಗಿದೆ.

ಕಡತಗಳಲ್ಲಿ ಸಲ್ಲಿಸಿರುವ ಮೂಲ ದಾಖಲೆಗಳು ಅವಶ್ಯವಿದ್ದಲ್ಲಿ ಆಗಸ್ಟ್ 2ರಿಂದ ಸೆಪ್ಟಂಬರ್ 1ರವರೆಗೆ ತೆಗೆದುಕೊಳ್ಳಬಹುದು. ನಂತರ ಮೂಲ ದಾಖಲೆಗಳಿಗೆ ಆಯೋಗವು ಜವಾಬ್ದಾರಿ ಹೊಂದಿರುವುದಿಲ್ಲ. ಸೆ.2ರ ನಂತರ ಕಡತಗಳನ್ನು ಕಡ್ಡಾಯವಾಗಿ ನಾಶಗೊಳಿಸಲು ಕ್ರಮ ವಹಿಸಲಾ ಗುವುದು ಎಂದು ಜಿಲ್ಲಾ ಗ್ರಾಹಕರ ಆಯೋಗದ ಸಹಾಯಕ ರಿಜಿಸ್ಟ್ರಾರ್ ಮತ್ತು ಸಹಾಯಕ ಆಳಿತಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News