ಅಸ್ಸಾಂ-ಮಿಝೋರಾಂ ಗಡಿ ವಿವಾದ: ಅರೆ ಸೇನಾ ಪಡೆಯ ನಿಯೋಜಿಸಲು ಉಭಯ ರಾಜ್ಯಗಳ ಒಪ್ಪಿಗೆ
Update: 2021-07-28 23:02 IST
ಹೊಸದಿಲ್ಲಿ, ಜು. 28: ಅಸ್ಸಾಂ-ಮಿಝೋರಾಂ ಗಡಿಯಲ್ಲಿ ಹಿಂಸಾಚಾರ ಸಂಭವಿಸಿದ ಹಿನ್ನೆಲೆಯಲ್ಲಿ ಉಭಯ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಡಿಜಿಪಿಗಳೊಂದಿಗೆ ಕೇಂದ್ರ ಸರಕಾರ ಬುಧವಾರ ಸಭೆ ನಡೆಸಿದೆ. ಹಿಂಸಾಚಾರ ಪೀಡಿತ ಗಡಿಯಲ್ಲಿ ಅರೆಸೇನಾ ಪಡೆಗಳನ್ನು ನಿಯೋಜಿಸಲು ಅಸ್ಸಾಂ ಹಾಗೂ ಮಿಝೋರಾಂ ಒಪ್ಪಿಕೊಂಡಿವೆ ಎಂದು ಅಸ್ಸಾಂನ ಮುಖ್ಯ ಕಾರ್ಯದರ್ಶಿ ಸಭೆಯ ಬಳಿಕ ತಿಳಿಸಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ವಹಿಸಿದ್ದರು. ಅಸ್ಸಾಂನ ಮುಖ್ಯ ಕಾರ್ಯದರ್ಶಿ ಜಿಷ್ಣು ಬರುವಾ ಹಾಗೂ ಡಿಜಿಪಿ ಭಾಸ್ಕರ್ ಜ್ಯೋತಿ ಮಹಾಂತ, ಮಿಝೋರಾಂನ ಮುಖ್ಯ ಕಾರ್ಯದರ್ಶಿ ಲಾಲ್ನುನ್ಮಾವಿಯಾ ಚುವಾಂಗೊ ಹಾಗೂ ಡಿಜಿಪಿ ಎಸ್.ಬಿ.ಕೆ. ಸಿಂಗ್ ಪಾಲ್ಗೊಂಡರು.