ಅಮೆರಿಕದ ಅಲಾಸ್ಕಾದಲ್ಲಿ 8.2 ತೀವ್ರತೆಯ ಭೂಕಂಪ; ಸುನಾಮಿ ಎಚ್ಚರಿಕೆ

Update: 2021-07-29 08:45 GMT

ವಾಷಿಂಗ್ಟನ್: ಅಲಾಸ್ಕಾ ಪರ್ಯಾಯ ದ್ವೀಪದಲ್ಲಿ ಬುಧವಾರ ತಡರಾತ್ರಿ 8.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದ್ದು ಸುನಾಮಿಯ ಎಚ್ಚರಿಕೆಯನ್ನು ನೀಡಿದೆ.

ಪೆರಿವಿಲ್ಲೆ ಪಟ್ಟಣದ ಆಗ್ನೇಯಕ್ಕೆ 56 ಮೈಲಿ (91 ಕಿಲೋಮೀಟರ್) ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಎಸ್ ತಿಳಿಸಿದೆ. ಅಮೆರಿಕ ಸರಕಾರವು ದಕ್ಷಿಣ ಅಲಾಸ್ಕಾ ಹಾಗೂ  ಅಲಾಸ್ಕ ಪರ್ಯಾಯ ದ್ವೀಪಗಳಿಗೆ ಸುನಾಮಿ ಎಚ್ಚರಿಕೆ ನೀಡಿದೆ.

"ಈ ಭೂಕಂಪದಿಂದ ಅಪಾಯಕಾರಿ ಸುನಾಮಿ ಅಲೆಗಳು ಕೆಲವು ಕರಾವಳಿಗಳಲ್ಲಿ ಮುಂದಿನ ಮೂರು ಗಂಟೆಗಳಲ್ಲಿ ಸಾಧ್ಯವಿದೆ" ಎಂದು ಅಮೆರಿಕದ ಸುನಾಮಿ ಎಚ್ಚರಿಕೆ ವ್ಯವಸ್ಥೆ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News