ಆಫ್ರಿಕಾದ ರೈಡರ್ ಗಳಿಗೆ ಜನಾಂಗೀಯ ನಿಂದನೆ: ಸೈಕ್ಲಿಂಗ್ ಮುಖ್ಯಸ್ಥನನ್ನು ಒಲಿಂಪಿಕ್ಸ್‌ನಿಂದ ವಾಪಸ್ ಕರೆಸಿಕೊಂಡ ಜರ್ಮನಿ

Update: 2021-07-29 12:26 GMT
ಸಾಂದರ್ಭಿಕ ಚಿತ್ರ. photo:  AP/PTI

ಟೋಕಿಯೊ: ಸೈಕ್ಲಿಂಗ್ ನ ಪುರುಷ ಸ್ಪರ್ಧಿಗಳ ಟೈಮ್ ಟ್ರಯಲ್ ಸಂದರ್ಭದಲ್ಲಿ ಆಫ್ರಿಕಾದ ಸೈಕಲ್ ರೈಡರ್ ಗಳ ಬಗ್ಗೆ ಜನಾಂಗೀಯ ನಿಂದನೆ ಮಾಡಿದ್ದ ಜರ್ಮನಿಯ ಸೈಕ್ಲಿಂಗ್ ತಂಡದ ಕ್ರೀಡಾ ನಿರ್ದೇಶಕರನ್ನು ಟೋಕಿಯೊ ಒಲಿಂಪಿಕ್ಸ್‌ನಿಂದ ಮನೆಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.

ಪ್ಯಾಟ್ರಿಕ್ ಮೊಸ್ಟರ್ ಇನ್ನು ಮುಂದೆ ಕ್ರೀಡಾಕೂಟದಲ್ಲಿ ಸೈಕ್ಲಿಂಗ್ ಕ್ರೀಡಾ ನಿರ್ದೇಶಕರಾಗಿ ಕಾರ್ಯನಿರ್ವಹಿಸುವುದಿಲ್ಲ ಹಾಗೂ ಜರ್ಮನಿಗೆ "ಶೀಘ್ರದಲ್ಲೇ" ಹಿಂದಿರುಗಲಿದ್ದಾರೆ ಎಂದು ಜರ್ಮನಿಯ ರಾಷ್ಟ್ರೀಯ ಒಲಿಂಪಿಕ್ಸ್  ಸಂಸ್ಥೆ (ಡಿಒಎಸ್ಬಿ) ಗುರುವಾರ ಹೇಳಿದೆ.

ಜರ್ಮನಿಯ ಎ ಆರ್ ಡಿ ನೆಟ್ವರ್ಕ್ ಬುಧವಾರ ಓಟದ ದೂರದರ್ಶನ ಪ್ರಸಾರದಲ್ಲಿ ತೊಡಗಿದ್ದಾಗ ಮಾಸ್ಟರ್ ಅಲ್ಜೀರಿಯಾದ ರೈಡರ್ ಗಳಿಗೆ ಜನಾಂಗೀಯ ನಿಂದನೆ ಮಾಡಿದ್ದಾರೆ ಎನ್ನಲಾಗಿದೆ

"ನನ್ನನ್ನು ಕ್ಷಮಿಸಿ, ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ನಾನು ಯಾರನ್ನೂ ಅಪಖ್ಯಾತಿಗೊಳಿಸಲು ಬಯಸುವುದಿಲ್ಲ” ಎಂದು 54 ವರ್ಷದ ಮೊಸ್ಟರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News