ಮೆಡಿಕಲ್,ಡೆಂಟಲ್ ಕೋರ್ಸುಗಳಲ್ಲಿ ಒಬಿಸಿ ವಿಭಾಗಕ್ಕೆ ಶೇ.27, ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ.10 ಮೀಸಲಾತಿ

Update: 2021-07-29 12:23 GMT

ಹೊಸದಿಲ್ಲಿ: ದೇಶದಲ್ಲಿ ಮೆಡಿಕಲ್ ಮತ್ತು ಡೆಂಟಲ್ ಕೋರ್ಸುಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ ಶೇ.27ರಷ್ಟು ಮೀಸಲಾತಿ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ.10ರಷ್ಟು ಮೀಸಲಾತಿಯು ಪದವಿ ಮತ್ತು ಸ್ನಾತಕೋತ್ತರ ಕೋರ್ಸುಗಳಿಗಾಗಿನ ಅಖಿಲ ಭಾರತ ಮೀಸಲಾತಿ ಯೋಜನೆಯನ್ವಯ ಲಭ್ಯವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೇಳಿದ್ದಾರೆ.

ಈ ಮೀಸಲಾತಿಯು ಎಂಬಿಬಿಎಸ್, ಎಂಡಿ, ಎಂಎಸ್, ಬಿಡಿಎಸ್, ಎಂಡಿಎಸ್ ಹಾಗೂ ಡಿಪ್ಲೋಮಾ ಮೆಡಿಕಲ್ ಕೋರ್ಸುಗಳಿಗೆ ಈ ಶೈಕ್ಷಣಿಕ ವರ್ಷದಿಂದ ಲಭ್ಯವಾಗಲಿದ್ದು ಸುಮಾರು 5,500 ಸೀಟುಗಳು ಈ ಮೀಸಲಾತಿಯಿಂದ ಈ ಎರಡು ವರ್ಗಗಳಿಗೆ ಲಭ್ಯವಾಗಲಿವೆ.

ಸರಕಾರದ ನಿರ್ಧಾರದಿಂದ ಎಂಬಿಬಿಎಸ್ ಕೋರ್ಸುಗಳಲ್ಲಿ 1,500 ಒಬಿಸಿ ವಿದ್ಯಾರ್ಥಿಗಳಿಗೆ, ಸ್ನಾತಕೋತ್ತರ ಕೋರ್ಸುಗಳಲ್ಲಿ 2,500 ಒಬಿಸಿ  ವಿದ್ಯಾರ್ಥಿಗಳಿಗೆ  ಪ್ರಯೋಜನವಾಗಲಿದೆ. ಈ ಎರಡೂ ವಿಭಾಗಗಳಲ್ಲಿ ಕ್ರಮವಾಗಿ ಸುಮಾರು 550 ಹಾಗೂ 1,000 ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಈ ಮೀಸಲಾತಿಯಿಂದ ಪ್ರಯೋಜನ ಪಡೆಯುತ್ತಾರೆ ಎಂದು ಆರೋಗ್ಯ ಸಚಿವಾಲಯದ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News