ಗಡಿ ಹಿಂಸಾಚಾರ: ಅಸ್ಸಾಂ ಜನತೆಗೆ ಮಿಝೋರಾಂಗೆ ಪ್ರಯಾಣಿಸದಂತೆ ಸಲಹೆ

Update: 2021-07-29 18:13 GMT
photo: NDTV

ಗುವಾಹಟಿ: ವೈಯಕ್ತಿಕ ಸುರಕ್ಷತೆಗೆ ಯಾವುದೇ ಬೆದರಿಕೆಯನ್ನು ಒಪ್ಪಿಕೊಳ್ಳಲಾಗದ ಕಾರಣ ಅಸ್ಸಾಂನ ಜನರು ಮಿಝೋರಾಂಗೆ ಪ್ರಯಾಣಿಸದಂತೆ ಸೂಚಿಸಲಾಗಿದೆ ಎಂದು ಅಸ್ಸಾಂ ಸರಕಾರವು ಇಂದು ನೀಡಿರುವ ಸಲಹೆಯೊಂದರಲ್ಲಿ ತಿಳಿಸಿದೆ.

ಈ ವಾರದ ಆರಂಭದಲ್ಲಿ ವಿವಾದಿತ ಗಡಿ ಪ್ರದೇಶದಲ್ಲಿ ಅಸ್ಸಾಂ-ಮಿಝೋರಾಂ ಪೊಲೀಸರ ನಡುವೆ ನಡೆದ ಹಿಂಸಾಚಾರವನ್ನು ಬೆಟ್ಟು ಮಾಡಿ ಅಸ್ಸಾಂ ಸರಕಾರ  ಈ ಸಲಹೆ ನೀಡಿದೆ.

ಅಸ್ಸಾಂ ಪೊಲೀಸರು ಹಿಂಸಾಚಾರವನ್ನು ಆರಂಭಿಸಿದ್ದಾರೆ ಎಂಬುದಕ್ಕೆ ತನ್ನ ಬಳಿ ಪುರಾವೆ ಇದೆ ಎಂದು ಮಿಝೋರಾಂ ಹೇಳಿದೆ ಹಾಗೂ  ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗಿನ ಗಡಿ ವಿಷಯಗಳ ಕುರಿತಾಗಿ ಯಶಸ್ವಿ ಭೇಟಿಯ ಎರಡು ದಿನಗಳ ನಂತರ ಇಂತಹ ಘಟನೆ ಹೇಗೆ ಸಂಭವಿಸಿತು ಎಂದು ಪ್ರಶ್ನಿಸಿತು.

ಎರಡು ರಾಜ್ಯಗಳ ಪೊಲೀಸರ ನಡುವೆ ಸೋಮವಾರ ನಡೆದ ಎಂದೂ ಕಂಡರಿಯದ ಘರ್ಷಣೆಯಲ್ಲಿ ಅಸ್ಸಾಂ ಪೊಲೀಸ್ ಇಲಾಖೆಯ ಆರು ಮಂದಿ ಸಾವನ್ನಪ್ಪಿದ್ದರು. ಇದಲ್ಲದೆ, 45 ಜನರು ಗಾಯಗೊಂಡಿದ್ದರು.

ಈ ಘಟನೆಯ ನಂತರವೂ ಕೆಲವು ಮಿಝೋ ನಾಗರಿಕ ಸಮಾಜ, ವಿದ್ಯಾರ್ಥಿಗಳು ಹಾಗೂ  ಯುವ ಸಂಘಟನೆಗಳು ನಿರಂತರವಾಗಿ ಅಸ್ಸಾಂ ರಾಜ್ಯ ಹಾಗೂ  ಅದರ ಜನರ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿವೆ. ಅನೇಕ ನಾಗರಿಕರು ಸ್ವಯಂಚಾಲಿತವಾಗಿ ಶಸ್ತ್ರಸಜ್ಜಿತರಾಗಿದ್ದಾರೆ ಎನ್ನುವುದು ಅಸ್ಸಾಂ ಪೊಲೀಸರೊಂದಿಗೆ ಲಭ್ಯವಿರುವ ವೀಡಿಯೊ ತುಣುಕಿನಿಂದ ತಿಳಿದುಬಂದಿದೆ ಅಸ್ಸಾಂ ಸರಕಾರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News